ಮಡಿಕೇರಿ, ಆ. 29: ಆಗಸ್ಟ್ ಹದಿನೆಂಟರ ಪ್ರಕೃತಿ ವಿಕೋಪದ ಬಳಿಕ ನಿರಂತರ ಸಂತ್ರಸ್ತರ ನೆರವಿಗೆ ಅಭಯ ಹಸ್ತ ಚಾಚಿರುವ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮ ಗ್ರಾಮಸ್ಥರ ಮನೆ ಬಾಗಿಲಿಗೆ ತೆರಳಿ ಇಂದಿಗೂ ಪರಿಹಾರ ಸಾಮಗ್ರಿ ವಿತರಿಸುತ್ತಿದೆ.
ತಾ. 27ರಂದು ಕಾಲೂರು ಹಾಗೂ 28ರಂದು ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಹಾಗೂ ದೇವಸ್ತೂರು ಗ್ರಾಮದ ಇನ್ನೂರಕ್ಕೂ ಹೆಚ್ಚು ಸಂತ್ರಸ್ತರಿಗೆ ಅಕ್ಕಿ, ಎಣ್ಣೆ, ಟಾರ್ಪಲ್ ಹಾಗೂ ಹಲವು ದಿನಬಳಕೆಯ ಕಿಟ್‍ಗಳನ್ನು ವಿತರಿಸಿದ್ದಾರೆ.
ಆಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದ ಸ್ವಾಮೀಜಿ, ಮೈಸೂರು ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಅವರ ನೇತೃತ್ವದಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರು, ದಾವಣಗೆರೆ ಹಾಗೂ
ಮಡಿಕೇರಿ, ಆ. 29: ಆಗಸ್ಟ್ ಹದಿನೆಂಟರ ಪ್ರಕೃತಿ ವಿಕೋಪದ ಬಳಿಕ ನಿರಂತರ ಸಂತ್ರಸ್ತರ ನೆರವಿಗೆ ಅಭಯ ಹಸ್ತ ಚಾಚಿರುವ ಪೊನ್ನಂಪೇಟೆಯ ಶ್ರೀ ರಾಮಕೃಷ್ಣ ಆಶ್ರಮ ಗ್ರಾಮಸ್ಥರ ಮನೆ ಬಾಗಿಲಿಗೆ ತೆರಳಿ ಇಂದಿಗೂ ಪರಿಹಾರ ಸಾಮಗ್ರಿ ವಿತರಿಸುತ್ತಿದೆ.
ತಾ. 27ರಂದು ಕಾಲೂರು ಹಾಗೂ 28ರಂದು ಕೆ. ನಿಡುಗಣೆ, ಕೆ. ಬಾಡಗ, ಹೆಬ್ಬೆಟ್ಟಗೇರಿ ಹಾಗೂ ದೇವಸ್ತೂರು ಗ್ರಾಮದ ಇನ್ನೂರಕ್ಕೂ ಹೆಚ್ಚು ಸಂತ್ರಸ್ತರಿಗೆ ಅಕ್ಕಿ, ಎಣ್ಣೆ, ಟಾರ್ಪಲ್ ಹಾಗೂ ಹಲವು ದಿನಬಳಕೆಯ ಕಿಟ್‍ಗಳನ್ನು ವಿತರಿಸಿದ್ದಾರೆ.
ಆಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದ ಸ್ವಾಮೀಜಿ, ಮೈಸೂರು ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದ ಅವರ ನೇತೃತ್ವದಲ್ಲಿ ಬೆಳಗಾವಿ, ಬೆಂಗಳೂರು, ಮೈಸೂರು, ದಾವಣಗೆರೆ ಹಾಗೂ ಆಶ್ರಮದ ವತಿಯಿಂದ ಸಾಮಗ್ರಿಗಳ ವಿತರಣೆ ಮಾಡುತ್ತಿದ್ದಾಗ, ಕಾರ್ಯನಿಮಿತ್ತ ಸಾಗುತ್ತಿದ್ದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕರ್ ಸ್ವಾಮೀಜಿಯನ್ನು ಭೇಟಿ ಆದರು. ತಾನು ಕೂಡಾ ರಾಮಕೃಷ್ಣ ಆಶ್ರಮದ ಹಳೆ ವಿದ್ಯಾರ್ಥಿ ಎಂದ ಅವರು, ಆಶ್ರಮದ ಸೇವಾಕಾರ್ಯ, ಸ್ವಾಮೀಜಿಯ ಸೇವಾತತ್ಪರತೆಯನ್ನು ಶ್ಲಾಘಿಸಿದರು.