ಕೂಡಿಗೆ, ಆ. 27: ಇತ್ತೀಚೆಗೆ ಜಲ ಪ್ರವಾಹದಿಂದಾಗಿ ಹಾರಂಗಿ ಮತ್ತು ಕಾವೇರಿ ನದಿ ಸಮೀಪದ ಮನೆಗಳಿಗೆ ನೀರು ನುಗ್ಗಿ ನಷ್ಟಕ್ಕೊಳಗಾದವರಿಗೆ ಕೂಡಿಗೆ, ಕೂಡುಮಂಗಳೂರು, ಮುಳ್ಳುಸೋಗೆ ಗ್ರಾಮ ಪಂಚಾಯ್ತಿಯಲ್ಲಿ ಮನೆ ಶುದ್ಧೀಕರಣಕ್ಕೆಂದು ಕಂದಾಯ ಇಲಾಖೆಯ ವತಿಯಿಂದ ತಾತ್ಕಾಲಿಕವಾಗಿ 3800 ರೂಗಳ ಚೆಕ್ ಅನ್ನು ವಿತರಿಸಲಾಯಿತು.

ಕೂಡಿಗೆ ವ್ಯಾಪ್ತಿಯಲ್ಲಿ ಗುರುತಿಸಿರುವ 98 ಮನೆಗಳು, ಕೂಡುಮಂಗಳೂರು ವ್ಯಾಪ್ತಿಯ 52, ಮುಳ್ಳುಸೋಗೆಯ 106 ಮನೆಗಳಿಗೆ ಚೆಕ್ ವಿತರಣೆ ಮಾಡಲು ಕಂದಾಯ ಇಲಾಖೆ ಮುಂದಾಗಿದೆ. ಇಂದು ಕೂಡಿಗೆ ಗ್ರಾ.ಪಂ ವ್ಯಾಪ್ತಿಯಲ್ಲಿ ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಚೆಕ್ ವಿತರಣೆ ಮಾಡಿದರು.

ಈ ಸಂದರ್ಭ ಕೂಡಿಗೆ ವ್ಯಾಪ್ತಿಯ ಗ್ರಾಮಲೆಕ್ಕಿಗ ಸಚಿನ್, ಕಂದಾಯ ವಸೂಲಿಗಾರ ಕೆ.ಸಿ. ರವಿ ಹಾಗೂ ಸಿಬ್ಬಂದಿಗಳು ಇದ್ದರು.