ಮಡಿಕೇರಿ, ಆ. 27: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಠಾಣೆಗೆ ತೆರಳಿದ್ದ ವಕೀಲರೊಬ್ಬರಿಗೆ ಠಾಣಾಧಿಕಾರಿ ಷಣ್ಮುಗ ಅವರು ಅಗೌರವ ತೋರಿ ದ್ದಾರೆ ಎಂದು ಆರೋಪಿಸಿ ವಕೀಲರ ಸಂಘದಿಂದ ಇಂದು ಒಂದು ಗಂಟೆ ಕಾಲ ಕಲಾಪ ಬಹಿಷ್ಕರಿಸಲಾಯಿತು.

ತಾ. 25 ರಂದು ತಮ್ಮ ಕಚೇರಿಯಲ್ಲಿ ಗಲಭೆ ಮಾಡಿ ತಮ್ಮ ಚಾಲಕನ ಮೇಲೆ ಕಲ್ಲು ಎಸೆದಿದ್ದ ರವಿಕಿರಣ್ ಎಂಬಾತನ ಮೇಲೆ ದೂರು ನೀಡುವದಕ್ಕಾಗಿ ವಕೀಲ ಮನೋಜ್ ಬೋಪಯ್ಯ ಎಂಬವರು ನಗರ ಠಾಣೆಗೆ ತೆರಳಿದ್ದ ಸಂದರ್ಭ ಠಾಣಾಧಿಕಾರಿಯವರು ಮನೋಜ್ ಬೋಪಯ್ಯ ಅವರೊಂದಿಗೆ ಅಗೌರವದಿಂದ ನಡೆದುಕೊಂಡರು. ಈ ಹಿನ್ನೆಲೆಯಲ್ಲಿ ಒಂದು ಗಂಟೆ ಕಾಲ ಕಲಾಪ ಬಹಿಷ್ಕರಿಸಿ ಠಾಣಾಧಿಕಾರಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿರುವದಾಗಿ ವಕೀಲರ ಸಂಘದ ಅಧ್ಯಕ್ಷ ಕವನ್ ತಿಳಿಸಿದ್ದಾರೆ.