ಮಡಿಕೇರಿ, ಆ. 27: ಹತ್ತು ದಿನಗಳ ಹಿಂದೆ ವಿಪರೀತ ಗಾಳಿ - ಮಳೆಯ ನಡುವೆ ಜೀವಂತ ಸಮಾಧಿಯಾಗಿರುವ ಮೂವತ್ತೊಕ್ಲು ಗ್ರಾಮದ ನಿವಾಸಿ, ಮುಕ್ಕಾಟಿರ ಸಾಬು ಉತ್ತಪ್ಪ ಅವರ ಶವ ಹೊರ ತೆಗೆಯಲು ನಿರಂತರ ಪ್ರಯತ್ನ ಮುಂದುವರಿದಿದೆ ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ‘ಶಕ್ತಿ’ಯೊಂದಿಗೆ ಪರಿಸ್ಥಿತಿ ವಿವರಿಸಿದ ಅವರು ಇಂದು ಮಳೆಯಿಂದಾಗಿ ಆ ಪ್ರಯತ್ನ ಮುಂದೂಡಿದ್ದಾಗಿ ವಿವರಿಸಿದರು.
ಮಾದಾಪುರ ಬಳಿಯ ಹಟ್ಟಿಹೊಳೆಯಿಂದ ಹಾಲೇರಿ ತನಕ ಭಾರೀ ಪ್ರಮಾಣದಲ್ಲಿ ಕಾಫಿ ತೋಟಗಳ ಎಕರೆಗಟ್ಟಲೆ ಭೂಕುಸಿತದಿಂದ ಮಣ್ಣು ಪಾಲಾಗಿದ್ದು, ರಸ್ತೆಯ ಬಗ್ಗೆ ಊಹಿಸಲು ಸಾಧ್ಯವಿಲ್ಲದಷ್ಟು ಹಾನಿಗೊಂಡಿ ರುವದಾಗಿ ವಿಷಾದಿಸಿದರು. ಈ ಮಾರ್ಗದ ಪುನರ್ ನಿರ್ಮಾಣಕ್ಕೆ ತಾಂತ್ರಿಕ ಸಲಹೆ ಪಡೆಯಲಾಗಿದ್ದು, ಆದಷ್ಟು ಬೇಗ ತಾತ್ಕಾಲಿಕ ವ್ಯವಸ್ಥೆಯ ಭರವಸೆ ಲಭಿಸಿದೆ ಎಂದರು.
ಗ್ರಾಮಗಳೇ ನಾಶ: ಮಡಿಕೇರಿ ಬಳಿಯ ಹೆಬ್ಬೆಟ್ಟಗೇರಿ, ಉದಯಗಿರಿ, ಮಕ್ಕಂದೂರು ವ್ಯಾಪ್ತಿಯ ಹೆಮ್ಮೆತ್ತಾಳು, ಮೇಘತ್ತಾಳು, ಮುಕ್ಕೋಡ್ಲು, ದೇವಸ್ತೂರು, ಕಾಲೂರು, ಸೀತಾರಾಮ ಪಾಟಿ, ಆವಂಡಿ, ಹಚ್ಚಿನಾಡು ತನಕ ಗ್ರಾಮಕ್ಕೆ ಗ್ರಾಮಗಳೇ ಸಂಪರ್ಕವಿಲ್ಲದೆ ಭೂ ನಾಶದ ಭಯಾನಕ ದೃಶ್ಯ ಎದುರಾಗಿದೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಇಗ್ಗೋಡ್ಲು, ಮೂವತ್ತೊಕ್ಲು, ಹಟ್ಟಿಹೊಳೆ, ಕಾಂಡನಕೊಲ್ಲಿ, ಕೊಪ್ಪತ್ತೂರು ಸಹಿತ ಕೆದಕಲ್ - ಮಕ್ಕಂದೂರು ನಡುವೆ ಅಲ್ಲಲ್ಲಿ ಕಾಂಡನಕೊಲ್ಲಿ ರಸ್ತೆಯೂ ಭೂಕುಸಿದು ಸಂಚರಿಸಲಾರದ ದುಸ್ಥಿತಿ ಎದುರಾಗಿದೆ ಎಂದು ಶಾಸಕರು ವಿವರಿಸಿದರು.
ಇನ್ನು ಮಾದಾಪುರ ಬಳಿಯ ಶಿರಂಗಳ್ಳಿ, ಗರ್ವಾಲೆ, ಕಿರುಗಂದೂರು, ತಾಕೇರಿ, ಬಿಳಿಗೇರಿ, ಹರಗ ಮುಂತಾದೆಡೆಗಳಲ್ಲಿ ಹಾಗೂ ಶಾಂತಳ್ಳಿ ಹೋಬಳಿ ಮತ್ತು ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಬೆಟ್ಟದಕೊಪ್ಪ ಸಹಿತ