ಕರಿಕೆ, ಆ. 27: ಪಾಣತ್ತೂರು-ಕರಿಕೆ ಮಾರ್ಗವಾಗಿ ಕೊಹಿನೂರು ಸಂಸ್ಥೆಯವರು ಬೆಂಗಳೂರುಗೆ ನೂತನ ಬಸ್ ಸಂಚಾರ ಆರಂಭಿಸಿದ್ದು, ಪಾಣತ್ತೂರುವಿನಿಂದ ರಾತ್ರಿ ಎಂಟು ಮೂವತ್ತಕ್ಕೆ ಹೊರಟು ಎಂಟು ಮುಕ್ಕಾಲು ಗಂಟೆಗೆ ಕರಿಕೆ ತಲುಪಲಿದ್ದು, ಭಾಗಮಂಡಲ-ವೀರಾಜಪೇಟೆ ಮಾರ್ಗವಾಗಿ ಬೆಂಗಳೂರಿಗೆ ಬೆಳಿಗ್ಗೆ ಐದು ಗಂಟೆಗೆ ತಲಪಲಿದೆ.