ಗೋಣಿಕೊಪ್ಪ ವರದಿ, ಆ. 27: ಹಾಡಿಗೇರಿ, ಹಟ್ಟಿಹೊಳೆ ಭಾಗದಲ್ಲಿ ಭೂಕುಸಿತದಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಯಾವ ಸವಲತ್ತುಗಳು ದೊರೆಯುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.

ವಿತರಣೆಗೆ ಬರುವ ಸೇವಾ ಕಾರ್ಯಕರ್ತರೊಂದಿಗೆ ಕೆಲವರು ತಡೆ ಮಾಡುತ್ತಿದ್ದಾರೆ. ಇದರಿಂದಾಗಿ ಸವಲತ್ತಿನಿಂದ ವಂಚಿತರಾಗುತ್ತಿದ್ದೇವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ವಿತರಣೆ ವಿಷಯದಲ್ಲಿ ಸೇವಾ ಕಾರ್ಯಕರ್ತರ ಹಾಗೂ ಗ್ರಾಮಸ್ಥರೊಂದಿಗೆ ಮಾತಿಗೆ ಮಾತು ನಡೆಯುತ್ತಿದೆ. ಅಕ್ಕಿಯಾದರೂ ನೀಡುವಂತಾಗಬೇಕು ಎಂದು ಸ್ಥಳೀಯ ಸಂತ್ರಸ್ತ ಡೇನಿಯಲ್ ಮನವಿ ಮಾಡಿಕೊಂಡಿದ್ದಾರೆ.