ಸುಂಟಿಕೊಪ್ಪ, ಆ. 25: ಸುಂಟಿಕೊಪ್ಪ ಸುತ್ತಲಿನ ಗ್ರಾಮಗಳಲ್ಲಿ ಸಂಭವಿಸಿದ ಜಲಪ್ರಳಯದಿಂದ ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಇಲ್ಲಿನ ಪುನರ್ವಸತಿ ಕೇಂದ್ರದಲ್ಲಿ ನೆಲೆಸಿರುವ ಸಂತ್ರಸ್ತರನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜ್ಯ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಮಾಜಿ ಸಚಿವ ವಿಜಯ ಶಂಕರ್ ಗುರುವಾರ ಭೇಟಿ ನೀಡಿ ಪುರ್ನವಸತಿ ಕೇಂದ್ರದಲ್ಲಿ ನೀಡಲಾಗುವ ಆಹಾರ ಪÀರಿಶೀಲಿಸಿ ಸಂತ್ರಸ್ತರ ಸಮಸ್ಯೆಯನ್ನು ಅವಲೋಕಿಸಿದರು.
ನಂತರ ಮಾತನಾಡಿದ ಸಿದ್ದರಾಮಯ್ಯ, ಈಗಾಗಲೇ ಸರ್ಕಾರದ ಮಟ್ಟದಲ್ಲಿ ಪ್ರತಿ ಗ್ರಾಮದಲ್ಲಿ ಉಂಟಾದ ಅನಾಹುತ ಗಳು, ಆಸ್ತಿಪಾಸ್ತಿಗಳನ್ನು ಕಳೆದು ಕೊಂಡವರ ಬಗ್ಗೆ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಆದೇಶಿಸ ಲಾಗಿದೆ. ರೈತರ ಸಾಲವನ್ನು ಕೂಡಲೇ ಮನ್ನಾ ಮಾಡಿದರೆ ತಕ್ಕಮಟ್ಟಿನ ಪರಿಹಾರ ದೊರಕಲಿದೆ ಎಂದರು.
ಸಂತ್ರಸ್ತರ ವಸತಿ ಕೇಂದ್ರಕ್ಕೆ ಭೇಟಿ ನೀಡಿದ್ದ ಸಂದರ್ಭ ಸಂತ್ರಸ್ತರೊಂದಿಗೆ ಸಮಸ್ಯೆಯನ್ನು ಆಲಿಸುವ ಬದಲು ಕೆಲವರಿಗೆ ಸೆಲ್ಫಿ ಸಮಸ್ಯೆಯೇ ಜಾಸ್ತಿಯಾಗಿ ಕಂಡು ಬಂದು ಇದರ ಬಗ್ಗೆ ಕೆಲವರು ವಿಷಾದ ವ್ಯಕ್ತಪಡಿಸಿದ್ದು ಕಂಡುಬಂತು.