ಸುಂಟಿಕೊಪ್ಪ, ಆ.26: ಬೆಂಗಳೂರು ಕೊರಮಂಗಲದ ಸಾಫ್ಟ್ ಸರ್ವಿಸ್ ವತಿಯಿಂದ ಜಲಪ್ರಳಯದಲ್ಲಿ ನೆರೆ ಸಂತ್ರಸ್ತ ಕೇಂದ್ರಗಳಿಗೆ ಭೇಟಿ ನೀಡಿ ಕೇಂದ್ರಗಳ ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಸುಂಟಿಕೊಪ್ಪದಲ್ಲಿ ಕಾರ್ಯಾಚರಿಸುತ್ತಿರುವ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣಮಂಟಪ, ಸಂತ ಅಂತೋಣಿ ಹಿರಿಯ ಪ್ರಾಥಮಿಕ, ಸಂತ ಮೇರಿ ಆಂಗ್ಲಮಾಧ್ಯಮ ಶಾಲೆ, ಖತ್ತೀಜ ಉಮ್ಮ ಮದರಸ ಪುರ್ನವಸತಿ ಕೇಂದ್ರಗಳಿಗೆ ಕೊರಮಂಗಲದ 24ಘಿ7 ಸಾಫ್ಟ್ ಸರ್ವಿಸ್ ಸಂಸ್ಥೆಯ 21 ಯುವಕ ಯುವತಿಯರ ತಂಡವು ತೆರಳಿ ಅಲ್ಲಿನ ಕೊಠಡಿ ಹಾಗೂ ಆವರಣವನ್ನು ಸ್ವಚ್ಛಗೊಳಿಸಿದರು.
ತಂಡದ ನಾಯಕರಾದ ಶ್ರೀಧರ್ ಮಾತನಾಡಿ ನೆರೆ ಹಾವಳಿಯಿಂದ ಕೆಲಸ ಇಲ್ಲದೆ ಇರುವ ಜನತೆಯು ನಮ್ಮ ಸಂಸ್ಥೆಯವರನ್ನು ಮೊಬೈಲ್ ಸಂಖ್ಯೆ 7022615462,9686114660 ಇವರನ್ನು ಸಂಪರ್ಕಿಸಿದರೆ ಉದ್ಯೋಗ ದೊರಕಿಸಿಕೊಡುವದಾಗಿ ತಿಳಿಸಿದರು.