ಮಡಿಕೇರಿ, ಆ. 25: ಮಳೆ-ಗಾಳಿ ಆರ್ಭಟ, ಜಲ ಪ್ರವಾಹದಲ್ಲಿ ಭೂಕುಸಿತದಿಂದ ಪೃಥ್ವಿಯಡಿ ಹೂತುಹೋದವರ ಪಾರ್ಥಿವ ಶರೀರಗಳನ್ನು ಮೇಲೆತ್ತುವದು ರಕ್ಷಣಾ ಪಡೆಗೆ ಹರಸಾಹಸವೆನಿಸಿದೆ. ತಮ್ಮ ನೆಚ್ಚಿನ ಕುಟುಂಬದ ಸದಸ್ಯರು ಭೂಗತರಾಗಿದ್ದು, ಅವರ ಮೃತದೇಹವನ್ನಾದರೂ ನೋಡಿದರೆ ಅಂತಿಮ ಸಂಸ್ಕಾರವಾದರೂ ನಡೆಸಬಹುದೆನ್ನುವ ತವಕ ಜೀವಂತ ಉಳಿದ ಕುಟುಂಬ ಸದಸ್ಯರದ್ದಾಗಿದೆ. ಇಂದು ಮತ್ತೆ ಮೂರು ಮೃತ ದೇಹಗಳು ರಕ್ಷಣಾ ಪಡೆಗಳಿಂದ ಮೇಲಕ್ಕೆತಲ್ಪಟ್ಟಿವೆ. ಇದರಿಂದ ಜಿಲ್ಲಾಡಳಿತದ ಅಂಕಿ ಅಂಶ ಪ್ರಕಾರ ಇದುವರೆಗೆ ಒಟ್ಟು ಸಾವಿನ ಸಂಖ್ಯೆ 13ಕ್ಕೆ ಏರಿಕೆ.ಉದಯಗಿರಿಯಲ್ಲಿ ತಾ. 16ರ ಪ್ರಾಕೃತಿಕ ವಿಕೋಪಕ್ಕೆ ಬಲಿಯಾಗಿ ಭೂಮಿಯಡಿ ಸೇರಿದ್ದ ಕೊರಗಪ್ಪ ಎಂಬವರ ಪುತ್ರ ಬಾಬು (56) ಎಂಬವರ ಮೃತ ಶರೀರವನ್ನು ಇಂದು ಹೊರತೆಗೆಯಲಾಗಿದೆ. ಗರುಡಾ ತಂಡವು ಅವಿರತ ಪರಿಶ್ರಮ ವಹಿಸಿ ಈ ಶವವನ್ನು ಹೊರತೆಗೆದು ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ. ಇನ್ನೊಂದೆಡೆ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ದಿ. ಉಕ್ರಪ್ಪ ಪೂಜಾರಿ ಅವರ ಪುತ್ರ ಚಂದ್ರಪ್ಪ (58) ಅವರ ಮೃತ ಶರೀರವನ್ನು ಭೂಗರ್ಭದಿಂದ ಎತ್ತಲಾಗಿದೆ. ಎನ್‍ಡಿಆರ್‍ಎಫ್ ತಂಡವು ಪರಿಶ್ರಮ ವಹಿಸಿ ಈ ಕಾರ್ಯವನ್ನು ನಿರ್ವಹಿಸಿದೆ. ಮೃತ ಚಂದ್ರಪ್ಪ ಎಸ್ಟೇಟ್ ರೈಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಹಾಡಗೇರಿ ಗ್ರಾಮದಲ್ಲಿ ಗರುಡಾ, ನೌಕಾಪಡೆ ಮತ್ತು ಪೊಲೀಸ್ ತಂಡಗಳ ಜಂಟಿ ಕಾರ್ಯಾಚರಣೆಯಲ್ಲಿ ಇಂದು ಮೃತ ದೇಹವೊಂದನ್ನು ಹೊರ ತೆಗೆಯಲಾಗಿದೆ. ಚಾಲಕ ವೃತ್ತಿಯಲ್ಲಿದ್ದ ದಿ. ಚೋಕಿಮು ಮಂತಾರೊ ಅವರ ಪುತ್ರ ಫ್ರಾನ್ಸಿಸ್ ಮಂತಾರೋ ಅಲಿಯಾಸ್ ಅಪ್ಪು (47) ಅವರ ಮೃತದೇಹ ಇಂದು ಪತ್ತೆಯಾಗಿದ್ದು, ಬಳಿಕ ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ತಮ್ಮ ಕುಟುಂಬದ ವ್ಯಕ್ತಿಗಳ ಮೃತದೇಹವಾದರು ಸಿಕ್ಕಿತಲ್ಲ ಎಂದು ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರದಲ್ಲಿ ತೊಡಗಿದ್ದಾರೆ. ಆದರೆ ಮಗದೊಂದು ಕಡೆ ತಮ್ಮ ನೆಚ್ಚಿನ ಕುಟುಂಬದ ಯಜಮಾನ ಸಾವಿನ ಬಳಿಕವಾದರೂ ಮುಖ ತೋರಿಸಲಿಲ್ಲವಲ್ಲ. ಮೃತ ದೇಹವಾದರೂ ಸಿಕ್ಕಿದ್ದರೆ ಅಂತಿಮ ದರ್ಶನ ಪಡೆಯಬಹುದಿತ್ತು ಎಂಬ ನೋವಿನಲ್ಲಿ ಕುಟುಂಬದ ಸದಸ್ಯರು ಮರುಗುತ್ತಿದ್ದಾರೆ.

ಕಾಟಕೇರಿಯಲ್ಲಿ ಜಲ ಪ್ರವಾಹದ ದುರ್ದಿನ ತಾ. 16 ರಂದು ಕೊಚ್ಚಿ ಹೋಗಿ ಕೆಸರಿನಡಿ ಹೂತು ಹೋಗಿದ್ದ ಗಿಲ್ಬರ್ಟ್ ಮೆಂಡೋಜಾ (54) ಅವರ ಮೃತದೇಹದ

ಫ್ರಾನ್ಸಿಸ್ ಮಂತಾರೋ ಅಲಿಯಾಸ್ ಅಪ್ಪು (47) ಅವರ ಮೃತದೇಹ ಇಂದು ಪತ್ತೆಯಾಗಿದ್ದು, ಬಳಿಕ ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು. ತಮ್ಮ ಕುಟುಂಬದ ವ್ಯಕ್ತಿಗಳ ಮೃತದೇಹವಾದರು ಸಿಕ್ಕಿತಲ್ಲ ಎಂದು ಕುಟುಂಬದ ಸದಸ್ಯರು ಅಂತಿಮ ನಮನ ಸಲ್ಲಿಸಿ ಅಂತ್ಯ ಸಂಸ್ಕಾರದಲ್ಲಿ ತೊಡಗಿದ್ದಾರೆ. ಆದರೆ ಮಗದೊಂದು ಕಡೆ ತಮ್ಮ ನೆಚ್ಚಿನ ಕುಟುಂಬದ ಯಜಮಾನ ಸಾವಿನ ಬಳಿಕವಾದರೂ ಮುಖ ತೋರಿಸಲಿಲ್ಲವಲ್ಲ. ಮೃತ ದೇಹವಾದರೂ ಸಿಕ್ಕಿದ್ದರೆ ಅಂತಿಮ ದರ್ಶನ ಪಡೆಯಬಹುದಿತ್ತು ಎಂಬ ನೋವಿನಲ್ಲಿ ಕುಟುಂಬದ ಸದಸ್ಯರು ಮರುಗುತ್ತಿದ್ದಾರೆ.

ಕಾಟಕೇರಿಯಲ್ಲಿ ಜಲ ಪ್ರವಾಹದ ದುರ್ದಿನ ತಾ. 16 ರಂದು ಕೊಚ್ಚಿ ಹೋಗಿ ಕೆಸರಿನಡಿ ಹೂತು ಹೋಗಿದ್ದ ಗಿಲ್ಬರ್ಟ್ ಮೆಂಡೋಜಾ (54) ಅವರ ಮೃತದೇಹದ

ಕುಟುಂಬವು 8 ಎಕರೆ ಜಾಗ ಹೊಂದಿತ್ತು. ಆ ದಿನ ಪ್ರವಾಹದ ನೀರನ್ನು ತಮ್ಮ ತೋಟದಿಂದ ಬೇರೆ ಕಡೆಗೆ ತಿರುಗಿಸುವ ಪ್ರಯತ್ನ ನಡೆದಿತ್ತು. ಸುಮಾರು 3.30ರ ಸಮಯ ಭೌತಿಶ್ ಅವರ ಮನೆ ಭಾಗಶಃ ಕುಸಿಯಿತು. ಈ ಮನೆ ಕುಸಿತಕ್ಕೆ ಕಾರಣವೇನೆಂದು ನೋಡಲು ಇಡೀ ಕುಟುಂಬ ಅತ್ತ ತೆರಳಿತ್ತು. ಅಷ್ಟರಲ್ಲಿ ಮೇಲ್ಭಾಗದಿಂದ ಸಣ್ಣ ಪ್ರಮಾಣದ ಭೂಕುಸಿತ ಉಂಟಾಯಿತು. ಅಲ್ಲದೇ ಭಾರೀ ಶಬ್ಧ ಕೇಳಿ ಬಂದಾಗ ಗಿಲ್ಬರ್ಟ್ ಅವರು ತಮ್ಮ ಪುತ್ರ ಅಕ್ಷಯ್‍ನೊಂದಿಗೆ ತಮ್ಮ ದನಗಳನ್ನು ಕೂಡಲೇ ಸುರಕ್ಷಿತ ಪ್ರದೇಶಕ್ಕೆ ಒಯ್ಯಲು ತಿಳಿಸಿದರು. ಅಷ್ಟರಲ್ಲಿ ಬುಡ ಸಹಿತ ಮರವೊಂದು ಕಿತ್ತು ಬಂದು ಬೆಟ್ಟ ಪ್ರದೇಶದಿಂದ ಭಾರೀ ಭೂಕುಸಿತ ಸಂಭವಿಸಿ ಇಡೀ ಪ್ರದೇಶ ಕೆಸರಿನಿಂದ ಆವೃತವಾಯಿತು ಎಂದು ರೀಟಾ ಮೆಂಡೋಜಾ ಕಹಿ ನೆನಪಿನ ಸುರುಳಿ ಬಿಚ್ಚಿಟ್ಟರು.

ಗಿಲ್ಬರ್ಟ್ ಅವರ ಪುತ್ರ ಅಕ್ಷಯ್ ತನ್ನ ಅನುಭವವನ್ನು ಹಂಚಿಕೊಂಡಿದ್ದು ಹೀಗೆ... ಭೌತೀಶ್‍ನ ಪತ್ನಿ, ನನ್ನ ಅಜ್ಜಿ ಮತ್ತು ತಾಯಿ ಕೆಸರಿನ ಮಧ್ಯೆ ಸಿಲುಕಿಕೊಂಡಿದ್ದು ಕಂಡುಬಂತು. ಅವರ ನರಳಾಟ ಕಿರುಚಾಟ ಕೇಳಿ ಬಂದಿತು. ದನಗಳನ್ನು ಅಲ್ಲಿಯೆ ಬಿಟ್ಟು ನಾನು ನನ್ನ ಕುಟುಂಬದ ಮಂದಿಯ ರಕ್ಷಣೆಗೆ ಧಾವಿಸಿದೆ. ಮೂವರನ್ನು ಕೆಸರಿನ ಮಡುವಿನಿಂದ ಹೊರತೆಗೆದು ಅನತಿ ದೂರದಲ್ಲಿದ್ದ ಭೌತೀಶ್ ಅವರ ಮನೆಗೆ ಅವರನ್ನು ಸೇರಿಸಿದೆ. ಹಿಂತಿರುಗಿ ಬರುವಷ್ಟರಲ್ಲಿ ನನ್ನ ತಂದೆಯನ್ನು ಕಾಣದೆ ನನಗೆ ದಿಕ್ಕೇ ತೋಚದಾಯಿತು. ಅಂದಿನಿಂದ ಇಂದಿನವರೆಗೂ ಅವರ ಮೃತದೇಹವನ್ನು ಕೂಡ ಕಾಣಲು ಸಾಧ್ಯವಾಗಿಲ್ಲ ಎಂದು ಉದ್ವೇಗದಿಂದ ನುಡಿದರು.

ಮತ್ತೆ ಪತ್ನಿ ರೀಟಾ ಮಾತು ಮುಂದುವರೆಸಿ ನನ್ನ ಪುತ್ರನಿಂದ ರಕ್ಷಿತಳಾದ ನಾನು ಆ ಬಳಿಕ ಕೆಲಕಾಲ ಪ್ರಜ್ಞಾಹೀನಳಾಗಿಬಿಟ್ಟಿದ್ದೆ. ಪ್ರಜ್ಞೆ ಬಂದ ಬಳಿಕವಷ್ಟೆ ನನ್ನ ಪತಿ ನಾಪತ್ತೆಯಾಗಿದ್ದಾರೆ ಎನ್ನುವ ಅರಿವಾಯಿತು ಎಂದು ನೆನಪಿಸಿಕೊಂಡರು. ಪುತ್ರ ಅಕ್ಷಯ್ ಮಾತು ಮುಂದುವರೆಸಿ ದುರ್ಘಟನೆ ಬಳಿಕ ನಿನ್ನೆಯವರೆಗೂ ನನ್ನ ತಂದೆಯ ಮೃತದೇಹವನ್ನು ಪತ್ತೆ ಮಾಡಲು ಯಾರೂ ಬರಲಿಲ್ಲ. ಇಂದು ಕಾರ್ಯಾಚರಣೆ ನಡೆದಿದೆಯಷ್ಟೆ ಎಂದು ದುಃಖಭರಿತರಾಗಿ ನುಡಿದರು.