ಸೋಮವಾರಪೇಟೆ, ಆ. 25: ಪ್ರಾಕೃತಿಕ ವಿಕೋಪದಿಂದ ತತ್ತರಿಸಿರುವ ಸಂತ್ರಸ್ತರಿಗೆ ಬೆಂಗಳೂರಿನ ಮತ್ತಿಕೆರೆಯ ಗೆಳೆಯರ ಬಳಗದಿಂದ ಶಾಂತಳ್ಳಿ ಹೋಬಳಿಯ ಕುಮಾರಳ್ಳಿ-ಬಾಚಳ್ಳಿ ಗ್ರಾಮಸ್ಥರಿಗೆ ಆರ್ಥಿಕ ನೆರವನ್ನು ನೀಡಲಾಯಿತು.

ಬೆಂಗಳೂರಿನಿಂದ ಆಗಮಿಸಿದ್ದ ಬಳಗದ ಮುಖ್ಯಸ್ಥರಾದ ಗಂಗಾಧರಮೂರ್ತಿ ಮತ್ತು ತಂಡದವರು ಗ್ರಾಮಸ್ಥರಿಗೆ ರೂ.1 ಲಕ್ಷ ಮೊತ್ತವನ್ನು ಹಸ್ತಾಂತರಿಸಿದರು. ಅಲ್ಲದೆ 50 ಸೀರೆಗಳನ್ನು ವಿತರಿಸಿದರು.

ಈ ಸಂದರ್ಭ ಗೆಳೆಯರ ಬಳಗದ ಪದಾಧಿಕಾರಿಗಳು ಮಾತನಾಡಿ, ಕೊಡಗಿನ ಸಂಕಷ್ಟಕ್ಕೆ ಈಗಾಗಲೇ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಳಗದ ಸದಸ್ಯರು ರೂ. 2 ಲಕ್ಷ ಮೊತ್ತದ ಚೆಕ್ ನೀಡಿದ್ದೇವೆ ಎಂದರು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಎಂ.ಎಸ್. ನಂದಕುಮಾರ್ ಮತ್ತಿತರರು ಇದ್ದರು.