ಮಡಿಕೇರಿ, ಆ. 25: ಮಡಿಕೇರಿ-ಮಂಗಳೂರು ಮಾರ್ಗ ರಸ್ತೆ ಸಂಪರ್ಕ ಕಡಿದು ಹೋಗಿದ್ದು, ಈ ಹಿನ್ನಲೆ ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗದ ಮೂಲಕ ಸುಳ್ಯಕ್ಕೆ ಬಸ್ ಸಂಚರಿಸುತ್ತಿದ್ದು, ಹಿಂದಿನಂತೆ 50 ರೂ ದರ ನಿಗದಿ ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು ಪ್ರಕಟಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಚಿವರು ಮಡಿಕೇರಿ, ಭಾಗಮಂಡಲ, ಕರಿಕೆ ಮಾರ್ಗ 56 ಕಿ.ಮೀ ಹೆಚ್ಚುವರಿ ಯಾಗಲಿದೆ. ಇದರಿಂದ 90 ರೂ ನಿಗದಿ ಮಾಡಲಾಗಿತ್ತು. ಇದನ್ನು ಹಿಂಪಡೆದು ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ಹಿಂದಿನ ದರದಲ್ಲಿಯೇ ಬಸ್ ದರ ನಿಗದಿಪಡಿಸ ಲಾಗಿದೆ ಎಂದು ಸಚಿವರು ತಿಳಿಸಿದರು. ಈಗಾಗಲೇ 7 ಮಿನಿ ಬಸ್‍ಗಳನ್ನು ಓಡಿಸಲಾಗುತ್ತಿದೆ. ಇನ್ನೂ 10 ಮಿನಿ ಬಸ್‍ಗಳನ್ನು ಮೂರು ನಾಲ್ಕು ದಿನದಲ್ಲಿ ಒದಗಿಸಲಾಗುವದು. ಈಗಾಗಲೇ ಹಲವು ಕಡೆಗಳಲ್ಲಿ ಮಿನಿ ಬಸ್‍ಗಳು ಓಡಾಡುತ್ತಿವೆ ಎಂದು ಸಾರಿಗೆ ಸಚಿವರು ಮಾಹಿತಿ ನೀಡಿದರು.

ಪ್ರಕೃತಿ ವಿಕೋಪ ಹಿನ್ನಲೆ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಸ್ತಾವನೆ ಸಲ್ಲಿಸಿದಲ್ಲಿ ತಕ್ಷಣವೇ ಸ್ಪಂದಿಸ ಲಾಗುವದು ಎಂದು ಸಚಿವರು ಹೇಳಿದರು.

ಸಾರಿಗೆ ಇಲಾಖೆ ಹಾಗೂ ಅಸೋಷಿಯೇಷನ್ ಸೇರಿದಂತೆ ಒಟ್ಟು 12.80 ಕೋಟಿ ರೂ ವೇತನವನ್ನು ಸಿಎಂ ಪರಿಹಾರ ನಿಧಿಗೆ ನೀಡಲಾಗುವದು ಎಂದರು.

ಕೆಎಸ್‍ಆರ್‍ಟಿಸಿ ನಷ್ಟದಲ್ಲಿದ್ದರೂ ಸಹ ಜನಸಾಮಾನ್ಯರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

ಕೊಡಗು ಮತ್ತು ಮಂಡ್ಯ ಜಿಲ್ಲೆಗೆ ಅವಿನಾಭಾವ ಸಂಬಂಧವಿದ್ದು, ಕಾವೇರಿ ನೀರು ಕುಡಿಯುವ ಜನತೆ ಕೊಡಗು ಜಿಲ್ಲೆಯ ಜನತೆಯೊಂದಿಗೆ ಸದಾ ಕೈಜೋಡಿಸಲಿದ್ದಾರೆ ಎಂದು ಸಚಿವರು ಹೇಳಿದರು.

(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ ಮಹೇಶ್ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಜಿಲ್ಲೆಗೆ 2 ಸಾವಿರ ಕೋಟಿ ರೂ ಹೆಚ್ಚು ನಷ್ಟ ಉಂಟಾಗಿದೆ. ಕೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ತೋಟವನ್ನು ಕಳೆದುಕೊಂಡಿದ್ದಾರೆ ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆ,

(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ ಮಹೇಶ್ ಅವರು ಮಾತನಾಡಿ ಪ್ರಕೃತಿ ವಿಕೋಪದಿಂದ ಜಿಲ್ಲೆಗೆ 2 ಸಾವಿರ ಕೋಟಿ ರೂ ಹೆಚ್ಚು ನಷ್ಟ ಉಂಟಾಗಿದೆ. ಕೂಲಿ ಕಾರ್ಮಿಕರು, ಬಡವರು ಸಂಕಷ್ಟದಲ್ಲಿದ್ದಾರೆ. ತೋಟವನ್ನು ಕಳೆದುಕೊಂಡಿದ್ದಾರೆ ಅವರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕಿದೆ. ಮನೆ, ವೇತನವನ್ನು ಜಿಲ್ಲೆಯ ಅತಿವೃಷ್ಠಿ ಪರಿಹಾರ ನಿಧಿಗೆ ನೀಡಲಾಗುವದು ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಬದಲೀ ಮಾರ್ಗದಲ್ಲಿ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಮೈಸೂರು-ಮಂಗಳೂರು ಮಾರ್ಗದಲ್ಲಿ ಸಂಚಾರ ಬಂದಾಗಿದ್ದು, ಪರ್ಯಾಯವಾಗಿ ಕುದುರೆಮುಖ ಮಾರ್ಗದಲ್ಲಿ ಮಂಗಳೂರಿಗೆ ಈಗಾಗಲೇ ಸಂಚಾರ ಆರಂಭಿಸಲಾಗಿದ್ದು, ಬದಲೀ ಮಾರ್ಗದಲ್ಲಿ ಸಂಚಾರ ದರದಲ್ಲಿ ಯಾವದೇ ಏರಿಕೆಯನ್ನು ಮಾಡಲಾಗಿರುವದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಗ್ರಾಮಸ್ಥರೊಂದಿಗೆ ಸಭೆ

ಅತಿವೃಷ್ಟಿಯಿಂದ ಕೊಡಗಿನ ಜನರು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು. ಅವರ ನೆರವಿಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರವು ಅಗತ್ಯ ನೆರವು ನೀಡಲಿದೆ. ಸರ್ಕಾರವು ತಮ್ಮೊಂದಿಗಿರುವದಾಗಿ ಸಾರಿಗೆ ಸಚಿವರಾದ ಡಿ.ಸಿ.ತಮ್ಮಣ್ಣ ತಿಳಿಸಿದರು.

ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಮಕ್ಕಂದೂರಿನ ಗೌಡ ಸಮಾಜದಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದ ಸಚಿವರು ಸಚಿವರ ಗೆಳೆಯರ ಬಳಗದಿಂದ ವೈಯಕ್ತಿಕವಾಗಿ ಸಂಪೂರ್ಣ ಮನೆ ಕಳೆದುಕೊಂಡ 15 ಕುಟುಂಬಗಳಿಗೆ ತಲಾ 1 ಲಕ್ಷ ಮೊತ್ತದ ಪರಿಹಾರದ ಹಣ ವಿತರಿಸಿದರು.