ಗೋಣಿಕೊಪ್ಪ ವರದಿ, ಆ. 24 : ಮಳೆಗೆ ಮನೆಯೊಂದು ಕುಸಿದು ಬಿದ್ದಿರುವ ಘಟನೆ ಬೆಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಘಟನೆ ನಡೆದಿರುವದರಿಂದ ಜೀವಹಾನಿ ತಪ್ಪಿದಂತಾಗಿದೆ.

ಅಲ್ಲಿನ ಬಾಚರಣಿಯಂಡ ಜಾನಕ್ಕಿ ಮನೆ ಕಳೆದುಕೊಂಡಿರುವವರು. ಇತ್ತೀಚೆಗೆ ಸುರಿದ ಮಳೆಯಿಂದಾಗಿ ಮನೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಮಾಹಿತಿಯಂತೆ ಮಂಗಳವಾರ ಹುದಿಕೇರಿ ಕಂದಾಯ ಅಧಿಕಾರಿಗಳು ಅವರ ಮನೆಗೆ ತೆರಳಿ ಕುಸಿಯುವ ಹಂತದಲ್ಲಿದ್ದ ಕಾರಣ ಮನೆ ಬಿಡುವಂತೆ ಸೂಚಿಸಿದ್ದರು. ಇದರಂತೆ ಜಾನಕಿ ತನ್ನ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದರು. ಬುಧವಾರ ರಾತ್ರಿ ಮನೆ ಕುಸಿದು ಬಿದ್ದಿದೆ. ಸ್ಥಳಕ್ಕೆ ಹುದಿಕೇರಿ ಕಂದಾಯ ನಿರೀಕ್ಷಕ ಚಿಲ್ಲವಂಡ ನಿಶಾನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. -ವರದಿ - ಸುದ್ದಿಪುತ್ರ