ಸುಂಟಿಕೊಪ್ಪ, ಆ. 22: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆಯ ಸ್ವಸಹಾಯ ಸಂಘಗಳ ಒಕ್ಕೂಟ ಕಾನ್‍ಬೈಲ್ ಹಾಗೂ ಶ್ರೀ ರಾಮ ಸೇವಾ ಸಮಿತಿ ಕಾನ್‍ಬೈಲ್ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ರಾಮ ಮಂದಿರದಲ್ಲಿ ಶೃದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.

ಉದ್ಘಾಟನೆ ನೇರವೇರಿಸಿ ಮಾತನಾಡಿದ ಸಮಾಜ ಸೇವಕಿ ನೀಲಮ್ಮ ಪೆಮ್ಮಯ್ಯ ದೇಶದಲ್ಲಿಯೇ ಧರ್ಮಸ್ಥಳ ಕ್ಷೇತ್ರ ಅತೀ ಸ್ವಚ್ಛ ಧಾರ್ಮಿಕ ಕೇಂದ್ರವಾಗಿದೆ. ಅದೇ ರೀತಿ ನಮ್ಮ ಸುತ್ತಮುತ್ತಲಿನ ಧಾರ್ಮಿಕ ಕೇಂದ್ರ ಪರಿಸರವನ್ನು ಸ್ವಚ್ಛವಾಗಿಡಬೇಕೆಂದು ವಿರೇಂದ್ರ ಹೆಗಡೆಯವರ ಆಶಯವಾಗಿದೆ ಎಂದು ಅವರು ಹೇಳಿದರು.

ಕಾನ್‍ಬೈಲ್ ಒಕ್ಕೂಟದ ಸದಸ್ಯರುಗಳಿಗೆ ಹಸಿರು ಇಂಧನ ಜಾಗೃತಿ ಮೂಡಿಸುವ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆಯಿಂದ ಸದಸ್ಯರುಗಳಿಗೆ ಸೋಲಾರ್ ಅನ್ನು ಯೋಜನಾಧಿಕಾರಿ ಪ್ರಕಾಶ್ ವೈ ವಿತರಿಸಿದರು.

ನಾಕೂರು-ಶಿರಂಗಾಲ ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಪಂಚಾಯಿತಿ ಸದಸ್ಯ ಸತೀಶ್, ಕಾನ್‍ಬೈಲ್ ಒಕ್ಕೂಟದ ಅಧ್ಯಕ್ಷೆ ಖತ್ತಿಜ, ಸೇವಾ ಪ್ರತಿನಿಧಿ ಶಿವಕುಮಾರ್, ಸೋಲಾರ್ ಮಾರ್ಕೆಟಿಂಗ್ ಪ್ರತಿನಿಧಿ ಶಶಿ ಉಪಸ್ಥಿತರಿದ್ದರು.