ಮಡಿಕೇರಿ, ಆ. 23: ಭಾರೀ ಗಾಳಿ-ಮಳೆಗೆ ರಜೆ ಘೋಷಿಸಲ್ಪಟ್ಟಿದ್ದ ಜಿಲ್ಲೆಯ ಶಾಲಾ-ಕಾಲೇಜುಗಳು ಇಂದಿನಿಂದ ಆರಂಭಗೊಂಡಿವೆ. ತೀವ್ರ ಹಾನಿಗೀಡಾಗಿರುವ 61 ಶಾಲೆ-ಕಾಲೇಜುಗಳನ್ನು ಹೊರತುಪಡಿಸಿ ಇತರ ಶಾಲೆಗಳಲ್ಲಿ ತರಗತಿಗಳು ನಡೆದಿವೆ. ವಿದ್ಯಾರ್ಥಿಗಳು ವಿರಳ ಸಂಖ್ಯೆಯಲ್ಲಿದ್ದರು.

ಈ ನಡುವೆ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದಂತಾಗಿದೆ.

ಜಿಲ್ಲೆಯಾದ್ಯಂತ ಒಟ್ಟು 11 ಸಾವಿರ ಪ.ಪೂ. ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಇಂದು 2100 ವಿದ್ಯಾರ್ಥಿಗಳು ಮಾತ್ರ ತರಗತಿಗೆ ಹಾಜರಾಗಿದ್ದಾರೆ. ಈ ನಡುವೆ ಪ್ರಾಂಶುಪಾಲರ ಸಂಘದ ವತಿಯಿಂದ ನಡೆಸಲಾಗುವ ಕಾಲು ವಾರ್ಷಿಕ ಪರೀಕ್ಷೆಯನ್ನು ಇಂದು ನಡೆಸಲಾಗಿದೆ. 2100 ಮಂದಿ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದು, ಇನ್ನುಳಿದ 8,900 ವಿದ್ಯಾರ್ಥಿಗಳು ಈ ಪರೀಕ್ಷೆಯಿಂದ ವಂಚಿತರಾದಂತಾಗಿದೆ. ಇದಕ್ಕೆ ಹೊಣೆ ಯಾರೆಂದು ಪೋಷಕರ ಪ್ರಶ್ನೆಯಾಗಿದೆ..?