ಮಡಿಕೇರಿ, ಆ. 22: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಜನವರಿಯಿಂದ ಈತನಕ ಸರಾಸರಿ ಕಳೆದ ವರ್ಷಕ್ಕಿಂತ 82.73 ಇಂಚಿನಷ್ಟು ಭಾರೀ ಮಳೆಯಾಗಿದೆ. ಇದು ಜಿಲ್ಲಾ ಸರಾಸರಿಯಾಗಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 61.39 ಇಂಚು ಮಳೆಯಾಗಿದ್ದರೆ, ಈ ಬಾರಿಯ ಪ್ರಮಾಣ 144.12 ಇಂಚಿನಷ್ಟಿದೆ.ಇನ್ನು ತಾಲೂಕುವಾರು ಮಳೆಯ ಅಂಕಿ ಅಂಶ ಗಮನಿಸಿದರೂ ಮಳೆಯ ಪ್ರಮಾಣ ದುಪ್ಪಟ್ಟಾಗಿದೆ. ಮಡಿಕೇರಿ ತಾಲೂಕಿನಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈ ತನಕ 203 ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 88 ಇಂಚು ಮಳೆ ಮಾತ್ರ ದಾಖಲಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಜನವರಿಯಿಂದ ಈ ತನಕ 47.85 ಇಂಚು ಮಳೆಯಾಗಿದ್ದರೆ ಈ ಬಾರಿ 111.82 ಇಂಚು ಮಳೆಯಾಗಿದ್ದು, 63.97 ಇಂಚಿನಷ್ಟು ಅಧಿಕವಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ವರ್ಷ ಜನವರಿಯಿಂದ ಈ ತನಕ 117 ಇಂಚು ಸರಾಸರಿ ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ 47.85 ಇಂಚು ಮಾತ್ರವಾಗಿದ್ದು, ಈ ಬಾರಿ 69.17 ಇಂಚು ಅಧಿಕ ಮಳೆಯಾಗಿದೆ.
ಕಳೆದ 24 ಗಂಟೆಯ ಮಾಹಿತಿ
ಕಳೆದ 24 ಗಂಟೆಯ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ 1.13 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 0.27 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.65 ಇಂಚು ಸರಾಸರಿ ಮಳೆಯಾಗಿದೆ.
ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿಯಲ್ಲಿ 1.20 ಇಂಚು, ನಾಪೋಕ್ಲು 0.48,
(ಮೊದಲ ಪುಟದಿಂದ) ಸಂಪಾಜೆ 1.24 ಹಾಗೂ ಭಾಗಮಂಡಲ ಹೋಬಳಿಗೆ 1.60 ಇಂಚು ಮಳೆಯಾಗಿದೆ. ವೀರಾಜಪೇಟೆ ತಾಲೂಕಿನ ವೀರಾಜಪೇಟೆ ಹೋಬಳಿಯಲ್ಲಿ 0.24, ಹುದಿಕೇರಿ 0.20, ಶ್ರೀಮಂಗಲ 0.31, ಪೊನ್ನಂಪೇಟೆ 0.40, ಬಾಳೆಲೆ 0.36 ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನ ಸೋಮವಾರಪೇಟೆ ಹೋಬಳಿಗೆ 0.88, ಶನಿವಾರಸಂತೆ 0.46, ಶಾಂತಳ್ಳಿ 1.78, ಕೊಡ್ಲಿಪೇಟೆ 0.46, ಸುಂಟಿಕೊಪ್ಪ ಹೋಬಳಿಗೆ 0.24 ಇಂಚು ಮಳೆಯಾಗಿದೆ.