ಕುಶಾಲನಗರ, ಆ. 22: ಕುಶಾಲನಗರದ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹ ಕಟ್ಟಡದ ಮೇಲೆ ಬೃಹತ್ ಆಲದ ಮರ ಮುರಿದು ಬಿದ್ದ ಘಟನೆ ನಡೆದಿದೆ. ಕಾಲೇಜು ಆವರಣದಲ್ಲಿದ್ದ ಆಲದ ಮರದ ಒಂದು ಭಾಗ ಬುಡಸಹಿತ ನೆಲಕ್ಕುರುಳಿದ್ದು ಅಡುಗೆ ಕೋಣೆ ಮೇಲ್ಚಾವಣಿಗಳಿಗೆ ಹಾನಿಯುಂಟಾಗಿದೆ. ಶಾಲಾ-ಕಾಲೇಜಿಗೆ ರಜೆಯಿದ್ದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ.