ಮಡಿಕೇರಿ, ಆ. 21: ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರ ಮತ್ತು ಕೃಷಿಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ತಾ. 24ರಂದು ಮಡಿಕೇರಿಯ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಕರೆಯಲಾಗಿತ್ತು. ಇದೀಗ ಮಡಿಕೇರಿ ತಾಲೂಕಿನಲ್ಲಿ ಅತಿವೃಷ್ಟಿಯಿಂದಾಗಿ ತೀವ್ರ ಹಾನಿಗೊಳಗಾಗಿರುವದರಿಂದ ಬ್ಯಾಂಕಿನ ಮಹಾಸಭೆಯನ್ನು ಮುಂದೂಡಲಾಗಿದೆ.