ನಾಪೆÇೀಕ್ಲು, ಆ. 20: ತಾ. 19ರಂದು ಕಕ್ಕಬ್ಬೆ ಸಮೀಪದ ನಾಲ್ಕುನಾಡು ಅರಮನೆ ಬಿರುಕು ಬಿಟ್ಟಿರುವ ಬಗ್ಗೆ ಸುದ್ದಿ ಪ್ರಕಟಗೊಂಡಿದ್ದು, ಈ ವಿಭಾಗದ ಜನರು ಹೆಚ್ಚಿನ ಆತಂಕಕ್ಕೆ ಕಾರಣರಾಗಿದ್ದರು. ಈ ಬಗ್ಗೆ ಸುಳ್ಳು ವದಂತಿ ಹಬ್ಬಿಸಿ ಮಾಧ್ಯಮಗಳನ್ನು ಹಾಗೂ ಜನರನ್ನು ದಾರಿ ತಪ್ಪಿಸುವವರ ವಿರುದ್ಧ ಜಿಲ್ಲಾಡಳಿತ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಗ್ರಾಮಸ್ಥರಾದ ಅಪ್ಪಾರಂಡ ವಿಜು ಪೂಣಚ್ಚ, ಅರೆಯಡ ರತ್ತು ಚಂಗಪ್ಪ, ಅರೆಯಡ ಪ್ರಸನ್ನ, ಅಪ್ಪಾರಂಡ ಕಾಳಪ್ಪ, ಅರೆಯಡ ಚಿಣ್ಣಪ್ಪ ಮತ್ತಿತರರು ಆಗ್ರಹಿಸಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಅವರು ಭಾರೀ ಮಳೆ, ಗಾಳಿ, ಪ್ರಕೃತಿ ವಿಕೋಪದಿಂದಾಗಿ ಇಡೀ ಜಿಲ್ಲೆಯ ಜನತೆ ಆತಂಕದ ಸ್ಥಿತಿ ಎದುರಿಸುತ್ತಿದ್ದಾರೆ. ಇದರ ನಡುವೆ ಕಿಡಿಗೇಡಿಗಳು ಇಲ್ಲಸಲ್ಲದ ವದಂತಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವದು ಹಾಗೂ ಮಾಧ್ಯಮಗಳಿಗೆ ನೀಡುತ್ತಿರುವದು ಜನರನ್ನು ಇನ್ನಷ್ಟೂ ಬೆಚ್ಚಿ ಬೀಳಿಸುವಂತಾಗಿದೆ. ಆದುದರಿಂದ ಇಂತಹ ಸಮಾಜ ಘಾತಕ ಶಕ್ತಿಗಳ ವಿರುದ್ಧ ಜಿಲ್ಲಾಡಳಿತ, ಜಿಲ್ಲಾ ಪೆÇಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.