ಮಡಿಕೇರಿ, ಆ. 15: ಕೊಡಗು ಜಿಲ್ಲೆಯ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳ ವಿವಿರ ಈ ಕೆಳಗಿನಂತಿದೆ.

ಗೋಣಿಕೊಪ್ಪ ವರದಿ: ಕುಟ್ಟ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಪೊನ್ನಂಪೇಟೆ ವಲಯ ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಆವರಣದಲ್ಲಿ ವಿದ್ಯಾರ್ಥಿಗಳು ಗಿಡ ನೆಟ್ಟು ಸಂಭ್ರಮಿಸಿದರು. ಈ ಸಂದರ್ಭ ಪೊನ್ನಂಪೇಟೆ ವಲಯ ಅಧಿಕಾರಿ ಹೆಚ್.ಎಸ್. ಗಂಗಾಧರ್, ಕುಟ್ಟ ಗ್ರಾ.ಪಂ. ಅಧ್ಯಕ್ಷೆ ಲೀಲಾವತಿ, ಪಿಡಿಓ ಬಲರಾಂ, ಶಾಲಾ ಮುಖ್ಯ ಶಿಕ್ಷಕಿ ಮುತ್ತಮ್ಮ, ಎಸ್‍ಡಿಎಂಸಿ ಉಪಾಧ್ಯಕ್ಷ ರಾಮಕೃಷ್ಣ ಪಾಲ್ಗೊಂಡಿದ್ದರು.

ಸೋಮವಾರಪೇಟೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಸಂತ ಜೋಸೆಫರ ಶಾಲೆಯಲ್ಲಿ ನಡೆದ ಕಾಜೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

1 ರಿಂದ 4 ನೇ ತರಗತಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಬಳಗುಂದ ಶಾಲೆಯ ಲೀಲಾವತಿ ಮತ್ತು ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಕಾವ್ಯ.ಕೆ, ಧಾರ್ಮಿಕ ಪಠಣ ಅರೇಬಿಕ್ ಸ್ಪರ್ಧೆಯಲ್ಲಿ ನವಾಜ್, ಲಘು ಸಂಗೀತ ಸ್ಪರ್ಧೆಯಲ್ಲಿ ಕಿರಗಂದೂರು ಶಾಲೆಯ ಧನ್ಯ, ಛದ್ಮವೇಷ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರಾಥಮಿಕ ಶಾಲೆಯ ನೈದುರಿ, ಚಿತ್ರಕಲೆ ಸ್ಪರ್ಧೆಯಲ್ಲಿ ಕಾಜೂರು ಶಾಲೆಯ ಶ್ರೇಯಾಂಕ್ ಪ್ರಸಾದ್, ಕಥೆ ಹೇಳುವ ಸ್ಪರ್ಧೆಯಲ್ಲಿ ಸವಿತ ಸಂದೇಶ್ ಅವರುಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಅಭಿನಯ ಸಂಗೀತ ಸ್ಪರ್ಧೆಯಲ್ಲಿ ಬಳಗುಂದ ಶಾಲೆಯ ಕಾವ್ಯ, ಕ್ಲೇ ಮಾಡಲಿಂಗ್‍ನಲ್ಲಿ ಯಡವನಾಡು ಆಶ್ರಮ ಶಾಲೆಯ ಪ್ರಕಾಶ್, ಭಕ್ತಿಗೀತೆ ಸ್ಪರ್ಧೆಯಲ್ಲಿ ಬಳಗುಂದ ಶಾಲೆಯ ಮಿಥುನ್, ಜಾನಪದ ನೃತ್ಯ ಸ್ಪರ್ಧೆಯಲ್ಲಿ ಯಡವನಾಡು ಶಾಲೆಯ ಹರ್ಷಿತ ತಂಡ, ದೇಶ ಭಕ್ತಿ ಗೀತೆ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರಾಥಮಿಕ ಶಾಲೆಯ ಸಾನ್ವಿ ತಂಡ, ಕೋಲಾಟ ಸ್ಪರ್ಧೆಯಲ್ಲಿ ಕಿರಗಂದೂರು ಶಾಲೆಯ ಪ್ರಜ್ಞಾ ತಂಡ, ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಜೂರು ಶಾಲೆಯ ನಿತಿನ್ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ.

5 ರಿಂದ 7ನೇ ತರಗತಿ ಕನ್ನಡ ಕಂಠಪಾಠ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರಾಥಮಿಕ ಶಾಲೆಯ ವಿಯೋಲಿನ್ ಲೋಬೋ, ಇಂಗ್ಲೀಷ್ ಕಂಠಪಾಠ ಸ್ಪರ್ಧೆಯಲ್ಲಿ ಬೇಳೂರು ಶಾಲೆಯ ಕೌಶಿಕ್, ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಕಾಜೂರು ಶಾಲೆಯ ಸ್ನೇಹ, ಧಾರ್ಮಿಕ ಪಠಣ ಸಂಸ್ಕøತ ಸ್ಪರ್ಧೆಯಲ್ಲಿ ಯಡವನಾಡು ಶಾಲೆಯ ರಚನ, ಧಾರ್ಮಿಕ ಪಠಣ ಅರೇಬಿಕ್ ಸ್ಪರ್ಧೆಯಲ್ಲಿ ಬಳಗುಂದ ಶಾಲೆಯ ತಸ್ಲೀಮ ಎಸ್, ಲಘು ಸಂಗೀತ ಸ್ಪರ್ಧೆಯಲ್ಲಿ ಬೇಳೂರು ಶಾಲೆಯ ಕೌಶಿಕ್ ಅವರುಗಳು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.

ಛದ್ಮವೇಷ ಸ್ಪರ್ಧೆಯಲ್ಲಿ ಯಡವನಾಡು ಶಾಲೆಯ ಪ್ರೀತಮ್, ಚಿತ್ರಕಲೆ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರಾಥಮಿಕ ಶಾಲೆಯ ಆದ್ಯ ಲೋಕೇಶ್, ಕಥೆ ಹೇಳುವ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರಾಥಮಿಕ ಶಾಲೆಯ ಶೈನಿ, ಅಭಿನಯ ಸಂಗೀತ ಸ್ಪರ್ಧೆಯಲ್ಲಿ ಯಡವನಾಡು ಶಾಲೆಯ ಸುಷ್ಮಿತ, ಕ್ಲೇ ಮಾಡಲಿಂಗ್ ಸ್ಪರ್ಧೆಯಲ್ಲಿ ಯಡವನಾಡು ಶಾಲೆಯ ದುರ್ಗೇಶ್, ಭಕ್ತಿಗೀತೆ ಸ್ಪರ್ಧೆಯಲ್ಲಿ ಬಳಗುಂದ ಶಾಲೆಯ ಕಿರಣ್ ಎಲ್., ಜಾನಪದ ನೃತ್ಯ ಸ್ಪರ್ಧೆಯಲ್ಲಿ ಯಡವಾರೆ ಶಾಲೆಯ ರಕ್ಷಾ ತಂಡ, ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಐಶ್ವರ್ಯ, ಕೋಲಾಟ ಸ್ಪರ್ಧೆಯಲ್ಲಿ ಯಡವನಾಡು ಶಾಲೆಯ ನಂದೀಶ್ ತಂಡ, ರಸಪ್ರಶ್ನೆ ಸ್ಪರ್ಧೆಯಲ್ಲಿ ಕಿರಗಂದೂರು ಶಾಲೆಯ ಆಕಾಶ್ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

8 ರಿಂದ 12ನೇ ತರಗತಿ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ಫಾತಿಮ, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸಂತ ಜೋಸೆಫರ ಪ್ರೌಢ ಶಾಲೆಯ ಡಿಶಲ್ ಮೋರಸ್, ಹಿಂದಿ ಭಾಷಣ ಸ್ಪಧೆರ್Éಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ಕಶೀಶ್, ಧಾರ್ಮಿಕ ಪಠಣ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ಮೀರಾಜ್ ಅವರುಗಳು ಸ್ಥಾನ ಪಡೆದುಕೊಂಡಿದ್ದಾರೆ.

ಜಾನಪದ ಗೀತೆ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢಶಾಲೆಯ ದರ್ಶನ್, ಭಾವಗೀತೆ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ಟೀನಾ, ಭರತ ನಾಟ್ಯ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ರಿಶ, ಆಶು ಭಾಷಣ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ದರ್ಶನ್, ಮಿಮಿಕ್ರಿ ಸ್ಪರ್ಧೆಯಲ್ಲಿ ಸರಕಾರಿ ಪ್ರೌಢಶಾಲೆ ಕಿರಗಂದೂರು ಶಾಲೆಯ ಜಿಶಾಂತ್, ಚರ್ಚಾ ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ದಿಶಾಂಕ್, ರಂಗೋಲಿ ಸ್ಪರ್ಧೆಯಲ್ಲಿ ದೊರೆ ಶ್ರೀವೀರ ರಾಜೇಂದ್ರ ಪ್ರೌಢ ಶಾಲೆಯ ಕಾವ್ಯ, ಗಝಲ್ ಗುಂಪು ಸ್ಪರ್ಧೆಯಲ್ಲಿ ಸಂತ ಜೋಸೆಫರ ಪ್ರೌಢಶಾಲೆ, ನೃತ್ಯ ಸ್ಪರ್ಧೆಯಲ್ಲಿ ಸೋಮವಾರಪೇಟೆ ಶಾಲೆಯ ದಿನೀತ, ಸಂಗೀತದಲ್ಲಿ ಕಿರಗಂದೂರು ಶಾಲೆಯ ಸಾಧನಾ ತಂಡ, ನಾಟಕದಲ್ಲಿ ಕಿರಗಂದೂರು ಶಾಲೆಯ ಶ್ವೇತ ತಂಡ, ದೃಶ್ಯಕಲೆಯಲ್ಲಿ ಸಂತ ಜೋಸೆಫರ ಪ್ರೌಢ ಶಾಲೆಯ ಆಕಾಶ್ ತಂಡ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.

ಶನಿವಾರಸಂತೆ: ಸಮೀಪದ ಗೋಪಾಲಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಂಡ್ಲಿ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ನಡೆದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಉದ್ಘಾಟಿಸಿ, ಮಾತನಾಡಿದರು.

ಹಂಡ್ಲಿ ಕ್ಲಸ್ಟರ್‍ಗೆ ಒಳಪಡುವ ಮೂದರವಳ್ಳಿ ‘ಎ’, ಮೂದರವಳ್ಳಿ ‘ಬಿ’ ಹಾರೆಹೊಸೂರು, ನಿಡ್ತ, ಹಂಡ್ಲಿ, ಗೋಪಾಲಪುರ, ಮುಳ್ಳೂರು, ಕಿತ್ತೂರು, ಸಂಪಿಗೆದಾಳು ಗ್ರಾಮಗಳ ಶಾಲೆಗಳ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.

ಸಂಪನ್ಮೂಲ ವ್ಯಕ್ತಿ ಡಿ.ಎಸ್. ಮಧುಕುಮಾರ್ ಪ್ರಾಸ್ತಾವಿಕ ನುಡಿಯಾಡಿದರು. ಮುಖ್ಯ ಅತಿಥಿಗಳಾದ ತಾಲೂಕು ಪಂಚಾಯಿತಿ ಸದಸ್ಯೆ ಲೀಲಾವತಿ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಸಿ.ಎಲ್. ಸುಬ್ಬಯ್ಯ ಹಾಗೂ ನಿವೃತ್ತ ಮುಖ್ಯ ಶಿಕ್ಷಕ ಡಿ.ಬಿ. ಸೋಮಪ್ಪ ಮಾತನಾಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ನಾಗವೇಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಟಿ.ಕೆ. ಅಪ್ಪಸ್ವಾಮಿ, ಶಿಕ್ಷಕ ವಿ.ಆರ್. ನಾಗರಾಜ್, ಸಮಿತಿ ಸದಸ್ಯರು, ವಿವಿಧ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಉಪಸ್ಥಿತರಿದ್ದರು.

ಗೋಣಿಕೊಪ್ಪ ವರದಿ: ಇಲ್ಲಿನ ಸಂತ ಥೋಮಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅರುವತೋಕ್ಲು ಸರ್ವದೈವತ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡರು.

ಸರ್ವದೈವತ ಶಾಲೆಯ ಕಿರಿಯ, ಹಿರಿಯ ಪ್ರಾಥಮಿಕ ವಿಭಾಗ ಮತ್ತು ಫ್ರೌಡ ಶಾಲೆ ಮತ್ತು ಕಾಲೇಜು ವಿಭಾಗಳಲ್ಲಿ ಪ್ರಥಮ ಬಹುಮಾಗಳನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದರು.

ಕಿರಿಯ ಪ್ರಾಥಮಿಕ ವಿಭಾಗ: ಕನ್ನಡ ಕಂಠಪಾಠದಲ್ಲಿ ಘನ್ ಶ್ಯಾಂ ಶರ್ಮ, ಛದ್ಮವೇಷ ಪಿ. ಆರ್ ವಿಸ್ಮಯ, ಆಶುಭಾಷಣ ಮೇರಿ ಶರಿನಿ, ಕೋಲಾಟ ನಿಹಾರಿಕ ಮತ್ತು ತಂಡ ಪ್ರಶಸ್ತಿ ಪಡೆದುಕೊಂಡಿತು.

ಹಿರಿಯ ಪ್ರಾಥಮಿಕ ವಿಭಾಗ: ಛದ್ಮವೇಷದಲ್ಲಿ ಎಂ.ಬಿ. ಮಾಚಯ್ಯ, ಚಿತ್ರಕಲೆ ಟಿ.ಎ. ಸಾಕ್ಷಿತ್, ಕಥೆ ಹೇಳುವುದು ಕೌಶಿಕ್ ಸೂರ್ಯ, ಕೋಲಾಟ ಪ್ರೇಕ್ಷಾ ಮತ್ತು ತಂಡ, ಕವ್ವಾಲಿ ಸಿನಾನ್ ಮತ್ತು ತಂಡ ಪ್ರಶಸ್ತಿ ಗಳಿಸಿತು.

ಫ್ರೌಡ ಶಾಲೆ ಮತ್ತು ಕಾಲೇಜು ವಿಭಾಗ: ಮಿಮಿಕ್ರಿಯಲ್ಲಿ ಬಿ.ಕೆ. ಯಶ್ವಂತ್, ಹಿಂದಿ ಭಾಷಣದಾಲ್ಲಿ ಎಂ.ಡಿ. ರೋಶ್ನಿ, ಛದ್ಮವೇಷ ಕೆ.ಡಿ. ಸಿರಿ ಬೋಜಮ್ಮ, ಚರ್ಚಾ ಸ್ಪರ್ಧೆ ಎ.ಕೆ. ಚೋದಮ್ಮ, ಸಂಗೀತ ಕಲೋತ್ಸವ ಪಿ.ಎಂ. ನವೀನ್ ಮತ್ತು ತಂಡ, ನಾಟಕ ಕಲೋತ್ಸವ ಪುನೀತ್ ಮತ್ತು ತಂಡ, ಧಾರ್ಮಿಕ ಪಠಣದಲ್ಲಿ ಎ.ಎ. ರಾಸಿಕ್ ಪಶ್ರಸ್ತಿ ಪಡೆದುಕೊಂಡರು.ಕೂಡಿಗೆ: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನೂತನ ಗ್ರಂಥಾಲಯ ಸಾಂಸಾ ವೇದಿಕೆ ಹಾಗೂ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಸಾಂಸಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಉಪ ಅಧೀಕ್ಷಕ ಪಿ.ಕೆ. ಮುರುಳೀಧರ್, ಭಾರತದ ವೈವಿದ್ಯಮಯ ಸಂಸ್ಕೃತಿಗಳನ್ನು ಅದರ ಹಿನ್ನಲೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಾನವ ಅವನಿಗಾಗಿ ಬದುಕಿದರೇ, ಜನ ಮರೆಯುತ್ತಾರೆ. ಸಮಾಜದ ಒಳಿತಿಗಾಗಿ ಅಥವಾ ಬೇರೆಯವರಿಗಾಗಿ ಬಾಳಿದರೇ ಸದಾಕಾಲ ನೆನಪಿನಲ್ಲಿರುತ್ತಾರೆ ಎಂದು ಸರ್. ಎಂ. ವಿಶ್ವೇಶ್ವರಯ್ಯ ಅವರನ್ನು ಉದಾಹರಿಸಿದರು.

ಕಾಲೇಜಿನ ಶಿಸ್ತು ಪ್ರಕೃತಿ ಸಿರಿಯನ್ನು ಕೊಂಡಾಡಿದ ಅವರು, ಒಂದು ಉತ್ತಮ ಶಾಲೆ ಅನೇಕ ಜೈಲುಗಳನ್ನು ಮುಚ್ಚಿಸುತ್ತದೆ. ಅಂತಹ ಉತ್ತಮ ಕಾಲೇಜು ಇದಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್, ನೂತನ ಗ್ರಂಥಾಲಯದ ಮಹತ್ವವನ್ನು ಸಾಂಸಾ ವೇದಿಕೆ ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಚಟುವಟಿಕೆಯನ್ನು ತಿಳಿಸಿದರು.

ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ. ಕೆಂಚಪ್ಪ, ವಿದ್ಯಾರ್ಥಿಗಳು ಕೂಡಿಗೆ: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನೂತನ ಗ್ರಂಥಾಲಯ ಸಾಂಸಾ ವೇದಿಕೆ ಹಾಗೂ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಸಾಂಸಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಉಪ ಅಧೀಕ್ಷಕ ಪಿ.ಕೆ. ಮುರುಳೀಧರ್, ಭಾರತದ ವೈವಿದ್ಯಮಯ ಸಂಸ್ಕೃತಿಗಳನ್ನು ಅದರ ಹಿನ್ನಲೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಾನವ ಅವನಿಗಾಗಿ ಬದುಕಿದರೇ, ಜನ ಮರೆಯುತ್ತಾರೆ. ಸಮಾಜದ ಒಳಿತಿಗಾಗಿ ಅಥವಾ ಬೇರೆಯವರಿಗಾಗಿ ಬಾಳಿದರೇ ಸದಾಕಾಲ ನೆನಪಿನಲ್ಲಿರುತ್ತಾರೆ ಎಂದು ಸರ್. ಎಂ. ವಿಶ್ವೇಶ್ವರಯ್ಯ ಅವರನ್ನು ಉದಾಹರಿಸಿದರು.

ಕಾಲೇಜಿನ ಶಿಸ್ತು ಪ್ರಕೃತಿ ಸಿರಿಯನ್ನು ಕೊಂಡಾಡಿದ ಅವರು, ಒಂದು ಉತ್ತಮ ಶಾಲೆ ಅನೇಕ ಜೈಲುಗಳನ್ನು ಮುಚ್ಚಿಸುತ್ತದೆ. ಅಂತಹ ಉತ್ತಮ ಕಾಲೇಜು ಇದಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್, ನೂತನ ಗ್ರಂಥಾಲಯದ ಮಹತ್ವವನ್ನು ಸಾಂಸಾ ವೇದಿಕೆ ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಚಟುವಟಿಕೆಯನ್ನು ತಿಳಿಸಿದರು.

ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ. ಕೆಂಚಪ್ಪ, ವಿದ್ಯಾರ್ಥಿಗಳು ಕೂಡಿಗೆ: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ನೂತನ ಗ್ರಂಥಾಲಯ ಸಾಂಸಾ ವೇದಿಕೆ ಹಾಗೂ ಎನ್.ಎಸ್.ಎಸ್. ಕಾರ್ಯಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಮಾರಂಭದಲ್ಲಿ ಸಾಂಸಾ ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ಉಪ ಅಧೀಕ್ಷಕ ಪಿ.ಕೆ. ಮುರುಳೀಧರ್, ಭಾರತದ ವೈವಿದ್ಯಮಯ ಸಂಸ್ಕೃತಿಗಳನ್ನು ಅದರ ಹಿನ್ನಲೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಾನವ ಅವನಿಗಾಗಿ ಬದುಕಿದರೇ, ಜನ ಮರೆಯುತ್ತಾರೆ. ಸಮಾಜದ ಒಳಿತಿಗಾಗಿ ಅಥವಾ ಬೇರೆಯವರಿಗಾಗಿ ಬಾಳಿದರೇ ಸದಾಕಾಲ ನೆನಪಿನಲ್ಲಿರುತ್ತಾರೆ ಎಂದು ಸರ್. ಎಂ. ವಿಶ್ವೇಶ್ವರಯ್ಯ ಅವರನ್ನು ಉದಾಹರಿಸಿದರು.

ಕಾಲೇಜಿನ ಶಿಸ್ತು ಪ್ರಕೃತಿ ಸಿರಿಯನ್ನು ಕೊಂಡಾಡಿದ ಅವರು, ಒಂದು ಉತ್ತಮ ಶಾಲೆ ಅನೇಕ ಜೈಲುಗಳನ್ನು ಮುಚ್ಚಿಸುತ್ತದೆ. ಅಂತಹ ಉತ್ತಮ ಕಾಲೇಜು ಇದಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಹಿರಿಯ ಉಪನ್ಯಾಸಕ ಹಂಡ್ರಂಗಿ ನಾಗರಾಜ್, ನೂತನ ಗ್ರಂಥಾಲಯದ ಮಹತ್ವವನ್ನು ಸಾಂಸಾ ವೇದಿಕೆ ಹಾಗೂ ಎನ್.ಎಸ್.ಎಸ್. ಘಟಕದ ಕಾರ್ಯಚಟುವಟಿಕೆಯನ್ನು ತಿಳಿಸಿದರು.

ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜೆ. ಕೆಂಚಪ್ಪ, ವಿದ್ಯಾರ್ಥಿಗಳು ಶನಿವಾರಸಂತೆ: ಶನಿವಾರಸಂತೆ ಭಾರತೀ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಪ್ಪಶೆಟ್ಟಳ್ಳಿಯ ಎ.ಎಂ. ಆನಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹೆಚ್.ಪಿ. ಶೇಷಾದ್ರಿ, ಗೌರವ ಕಾರ್ಯದರ್ಶಿಯಾಗಿ ಕೆ.ಎಂ. ಜಗನ್‍ಪಾಲ್ ಆಯ್ಕೆಯಾಗಿದ್ದಾರೆ.

*ಗೋಣಿಕೊಪ್ಪ: ಹುಲ್ಲಿನ ಮೇಲ್ಚಾವಣಿಯಲ್ಲಿ ಎರಡೇ ಎರಡು ಮಕ್ಕಳಿಂದ ಪ್ರಾರಂಭಗೊಂಡ ಶಿಕ್ಷಣ ಕೇಂದ್ರ 102 ವರ್ಷಗಳ ಹೊಸ್ತಿಲನ್ನು ದಾಟಿ ಶತಮಾನ ಆಚರಿಸಿಕೊಳ್ಳುವ ಸಂಭ್ರಮದಲ್ಲಿದೆ.

1916 ರಲ್ಲಿ ಊರಿನ ಹಿರಿಯರ ಸಹಕಾರದಿಂದ ಮತ್ತು ಮುಂದಾಲೋಚನೆಯಿಂದ ಗೋಣಿಕೊಪ್ಪ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭಗೊಂಡು ಲಕ್ಷಾಂತರ ಮಕ್ಕಳಿಗೆ ವಿದ್ಯಾರ್ಜನೆ ನೀಡಿದ ಶಾಲೆ ಇದೀಗ 102 ವರ್ಷಗಳನ್ನು ಪೂರೈಸಿದೆ.

1990 ರ ದಶಕದಲ್ಲಿ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ 2000 ಕ್ಕೂ ಮೇಲ್ಪಟ್ಟು ಇದ್ದುದ್ದನ್ನು ಮನಗಂಡ ಸರ್ಕಾರ ಸರ್ಕಾರಿ ಕನ್ನಡ ಮಾದರಿ ಶಾಲೆ ಎಂದು ನಾಮಕರಣ ಮಾಡಿದೆ. ತದನಂತರ ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಪಡೆದು ಉತ್ತಮ ಸಾಧನೆಗಳನ್ನು ಮಾಡಿದ್ದಾರೆ. ವೈದ್ಯರು, ಶಿಕ್ಷಕರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮನ್ನು ಗುರುತಿಸಿಕೊಂಡು ಶಾಲೆಯ ಕೀರ್ತಿಯನ್ನು ಬೆಳಗಿದ್ದಾರೆ.

ಅಂದು ಹುಲ್ಲಿನ ಮೇಲ್ಚಾವಣಿಯಲ್ಲಿ ಒಂದು ಕೊಠಡಿಯಲ್ಲಿ ಪ್ರಾರಂಭವಾದ ಶಾಲೆ ಈಗ ಸುಮಾರು 32 ಕ್ಕೂ ಹೆಚ್ಚು ಕೊಠಡಿಗಳನ್ನು ಹೊಂದಿವೆ. ಒಂದರಿಂದ ಎಂಟನೇ ತರಗತಿಯವರಗೆ ಸುಮಾರು 354ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಚಿತ್ರಕಲೆ, ಕ್ರೀಡೆ ಮತ್ತು ವಿಜ್ಞಾನÀದಲ್ಲಿಯೂ ಹೆಚ್ಚಿನ ಪ್ರಗತಿ ಹೊಂದಿರುವ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಸೇರಿದಂತೆ 13 ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಲಾ ಶಿಕ್ಷಕರಾಗಿ ಬಿ.ಆರ್. ಸÀತೀಶ್ ಶಾಲೆಯ ಗೋಡೆಗಳ ಮೇಲೆ ವಿವಿಧ ಆಕರ್ಷಕ ಕಲಾ ರಚನೆಗಳನ್ನು ಮಾಡುವ ಮೂಲಕ ಈ ಶಾಲೆಯನ್ನು ಸಾರ್ವಜನಿಕ ವಲಯದಲ್ಲಿ ಗಮನ ಸೆಳೆಯಲು ಕಾರಣರಾಗಿದ್ದಾರೆ. ಕ್ರೀಡೆಯಲ್ಲಿ ಮಕ್ಕಳನ್ನು ತೊಡಗಿಸಿ ಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಿ ಕ್ರೀಡೆಯಲ್ಲಿಯು ಶಾಲೆ ಮುಂದುವರಿಯುವಂತೆ ಶಿಕ್ಷಕ ರಮಾನಾಥ್ ಮೇಲುಗೈ ಸಾಧಿಸಿದ್ದಾರೆ. ಇವರೊಂದಿಗೆ ಇನ್ನಿತರ ಶಿಕ್ಷಕರು ಪಠ್ಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಉತ್ತಮ ಫಲಿತಾಂಶÀ ಹೊಂದಲು ಶ್ರಮಿಸುತ್ತಿದ್ದಾರೆ.

1916 ರಲ್ಲಿ ಶಾಲೆ ಪ್ರಾರಂಭವಾದರೂ ದಾಖಲಾತಿಗಳು ಮಾತ್ರ 1935 ರಿಂದ ಮಾತ್ರ ಹೊಂದಿದೆ. ವಿಶೇಷವಾಗಿ ಈ ಶಾಲೆಯಲ್ಲಿ ಕಳೆದ 3 ವರ್ಷಗಳಿಂದ ಎಲ್.ಕೆ.ಜಿ., ಯು.ಕೆ.ಜಿ. ತರಗತಿಗಳು ನಡೆಯುತ್ತಿರುವದು ಶಾಲೆಯ ಹೆಗ್ಗಳಿಕೆಯಾಗಿದೆ. ಈಗಾಗಲೇ ಎಲ್.ಕೆ.ಜಿ., ಯು.ಕೆ.ಜಿ. ತರಗತಿಯಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಶಾಲೆ ಶತಮಾನೋತ್ಸವ ಆಚರಿಸುವ ಸಂಮ್ರಮದಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚನೆಗೊಂಡಿದೆ ವಾಟ್ಸಾಪ್ ಗ್ರೂಪ್ ಮೂಲಕ ಹಳೆ ವಿದ್ಯಾರ್ಥಿಗಳ ಸಂಘಟನೆಗೆ ಶಿಕ್ಷಕ ಬಿ.ಆರ್. ಸತೀಶ್ ಚಾಲನೆ ನೀಡಿದ್ದಾರೆ.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ. ಮೋಹನ್, ಉಪಾಧ್ಯಕ್ಷರಾಗಿ ಮೋತಿ ಉತ್ತಪ್ಪ, ಕಾರ್ಯದರ್ಶಿಗಳಾಗಿ ಶಾಲೆಯ ಮುಖ್ಯ ಶಿಕ್ಷಕಿ ತೆಕ್ಕಡೆ ಶಶಿಕಲಾ, ಸಂಘಟನಾ ಕಾರ್ಯದರ್ಶಿಯಾಗಿ ನಾರಾಯಣ ಸ್ವಾಮಿ ನಾಯ್ಡು, ಸಹ ಕಾರ್ಯದರ್ಶಿಯಾಗಿ ಅಭಿಬುನ್ನಿಸಾ, ಖಜಾಂಚಿ ಪ್ರಮೋದ್ ಕಾಮತ್, ನಿರ್ದೇಶಕರುಗಳಾಗಿ 11 ಮಂದಿ ಆಯ್ಕೆಗೊಂಡಿದ್ದಾರೆ.