ವೀರಾಜಪೇಟೆ, ಆ. 15: ನಗರದ ದೇವಿ ಕ್ಷೇತ್ರಗಳಲ್ಲ್ಲಿ ಆಷಾಡ ಶುಕ್ರವಾರ ಪೂಜಾ ಮಾಹೋತ್ಸವ ವಿಜ್ರಂಭಣೆಯಿಂದ ಜರುಗಿತು. ವೀರಾಜಪೇಟೆ ನಗರದ ಮುಖ್ಯ ಬೀದಿ ತೆಲುಗರ ಬೀದಿಯ ಶ್ರೀ ದಕ್ಷಿಣ ಮಾರಿಯಮ್ಮ ದೇವಾಲಯ ಮತ್ತು ಶ್ರೀ ಅಂಗಾಳ ಪರಮೇಶ್ವರಿ ದೇಗುಲಗಳಲ್ಲಿ ಆಷಾಡ ಕೊನೆಯ ಪೂಜಾ ಮಹೋತ್ಸವಗಳು ಸಂಪನ್ನಗೊಂಡಿತು.

ದೇವಾಲಯದಲ್ಲಿ ಬೆಳಗ್ಗಿನಿಂದ ಅರ್ಚಕ ಸಮೂಹ ಶ್ರೀ ದೇವಿಗೆ ಬೆಳ್ಳಿ ಕವಚ ಧಾರಣೆ ಮಾಡಲಾಗಿ, ವಿವಿಧ ಹೂವುಗಳಿಂದ ವಿಶೇಷ ಅಲಂಕಾರ ಮಾಡಿದ್ದರು. ಶ್ರೀ ದೇವಿ ಕ್ಷೇತ್ರಗಳಲ್ಲಿ ವಿಶೇಷವಾಗಿ ಆಷಾಡ ತಿಂಗಳ ಮಂಗಳವಾರ ಮತ್ತು ಶುಕ್ರವಾರ ದಿನಗಳಂದು ವಿಶೇಷ ಪೂಜೆ ನೆರವೇರಿತು. ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿದವು.