ಕುಶಾಲನಗರ, ಆ. 15: ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಕುಶಾಲನಗರಕ್ಕೆ ಭೇಟಿ ನೀಡಿ ಪ್ರವಾಹ ಸಂತ್ರಸ್ಥ ಪ್ರದೇಶಗಳ ಪರಿಶೀಲನೆ ನಡೆಸುವದರೊಂದಿಗೆ ಸಂತ್ರಸ್ಥ ನಿವಾಸಿಗಳಿಗೆ ಸಾಂತ್ವನ ಹೇಳಿದರು. ಪಟ್ಟಣದ ಸರಕಾರಿ ಆಸ್ಪತ್ರೆ ಸಮೀಪದಲ್ಲಿರುವ ಸಾಯಿ ಬಡಾವಣೆಗೆ ಭೇಟಿ ನೀಡಿದ ಸಚಿವರು ರಕ್ಷಣಾ ಪಡೆಯ ಬೋಟ್‍ನಲ್ಲಿ ತೆರಳಿ ಮುಳುಗಡೆಯಾಗಿರುವ ಮನೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಸಲಹೆ ನೀಡಿದರು. ತಕ್ಷಣ ಅವಶ್ಯಕತೆಯಿರುವ ನಿವಾಸಿಗಳನ್ನು ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸುವದು, ನೀರು ಇಳಿಕೆಯಾದ ನಂತರ ಸ್ಥಳಕ್ಕೆ ಬಂದು ನಷ್ಟದ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದರು.

ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಪ್ರಕೃತಿ ವಿಕೋಪದಿಂದ ಈ ಪರಿಸ್ಥಿತಿ ಉಂಟಾಗಿದೆ. ಸಂತ್ರಸ್ಥರಿಗೆ ಸರಿಯಾದ ಸೌಲಭ್ಯಗಳನ್ನು ಕಲ್ಪಿಸಿ ಸೂಕ್ತ ರಕ್ಷಣೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು. ನದಿ ತಟದಲ್ಲಿ ಅಕ್ರಮವಾಗಿ ನಿವೇಶನ ನಿರ್ಮಾಣ ಮಾಡುವ ಜನರ ಮೇಲೆ ಕ್ರಮಕೈಗೊಳ್ಳಲು ಸ್ಥಳೀಯ ಆಡಳಿತ ಅಧಿಕಾರಿಗಳಿಗೆ ಆದೇಶ ನೀಡಲಾಗುವದು. ತಗ್ಗು ಪ್ರದೇಶಗಳಲ್ಲಿ ಬಡಾವಣೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸದಿರಲು ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸ್ಥಳೀಯ ಕೆಲವು ವ್ಯಕ್ತಿಗಳು ಸಚಿವರೊಂದಿಗೆ ಮಾತನಾಡಿ, ಕುಶಾಲನಗರದಲ್ಲಿ ಅಕ್ರಮ ಬಡಾವಣೆಗಳು ನಿರ್ಮಾಣ ಗೊಳ್ಳುವದರೊಂದಿಗೆ ನದಿ ತಟದ ಒತ್ತುವರಿ ಮಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಕಂಡುಬಂತು.

ಈ ಸಂದರ್ಭ ಸಚಿವರೊಂದಿಗೆ ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ತಹಶೀಲ್ದಾರ್ ಮಹೇಶ್, ಜಿಪಂ ಸದಸ್ಯೆ ಕೆ.ಪಿ. ಚಂದ್ರಕಲಾ, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಡಿವೈಎಸ್ಪಿ ಮುರಳೀಧರ್, ಕಂದಾಯ ಇಲಾಖಾ ಅಧಿಕಾರಿಗಳು ಇದ್ದರು.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಕುಶಾಲನಗರ ತಗ್ಗು ಪ್ರದೇಶಗಳಲ್ಲಿರುವ ಬಡಾವಣೆಗಳ ಮನೆಗಳು ನೀರಿನಿಂದ ಆವೃತಗೊಂಡಿದ್ದು, ಕುಶಾಲನಗರ ಸಾಯಿ ಬಡಾವಣೆಯ 15 ಕ್ಕೂ ಅಧಿಕ ಮನೆಗಳ ನಿವಾಸಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದೆ.

-ಚಂದ್ರಮೋಹನ್

ಬೋಟ್‍ನಲ್ಲಿ ತೆರಳಿದ ಸಚಿವರು