ವೀರಾಜಪೇಟೆ, ಆ. 14: ಬಿಟ್ಟಂಗಾಲ ಕೃಷಿ ಸಹಕಾರ ಸಂಘದ ಮುಂದಿನ ಸಾಲಿನ ಐದು ವರ್ಷಗಳ ಅವಧಿಗೆ ಪ್ರಸ್ತುತ ಆಡಳಿತರೂಢ ಚೇಂದ್ರಿಮಾಡ ಗಣೇಶ್ ನಂಜಪ್ಪ ಅವರ ತಂಡದ ಹದಿಮೂರು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಳೆದ 30ವರ್ಷಗಳಿಂದಲೂ ಆಡಳಿತ ನಡೆಸುತ್ತಿರುವ ಗಣೇಶ್ ನಂಜಪ್ಪ ಅವರ ತಂಡಕ್ಕೆ ಬಿ.ಜೆ.ಪಿ. ಈ ತನಕ ಪ್ರಬಲ ಪೈಪೋಟಿ ನೀಡಿದರೂ ಅವರಿಗೆ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಗಿಲ್ಲ. ಸಂಘದ ಆಡಳಿತ ಮಂಡಳಿಯಲ್ಲಿ ಗಣೇಶ್ ನಂಜಪ್ಪ ಹಾಗೂ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಪುಚ್ಚಿಮಂಡ ಸಾಬ ಬೆಳ್ಯಪ್ಪ ಪ್ರಮುಖರಾಗಿದ್ದಾರೆನ್ನಲಾಗಿದೆ.