ವೀರಾಜಪೇಟೆ, ಆ. 13: ಮಾಜಿ ಸ್ಯೆನಿಕರ ಸರÀಕಾರ ಸಂಘದ ಸದಸ್ಯರು ತಾ. 15 ಸ್ವಾತಂತ್ರ್ಯ ದಿನದಂದು ಯಾವದೇ ಪ್ರತಿಭಟನೆ ನಡೆಸುವದಿಲ್ಲ ಎಂದು ಮಾಜಿ ಸ್ಯೆನಿಕರ ಸಹಕಾರ ಸಂಘದ ಅಧ್ಯಕ್ಷ ಚೇಂದ್ರಿಮಾಡ ಗಣೇಶ್ ನಂಜಪ್ಪ ಸ್ಪಷ್ಟ ಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಅವರು ಕಾರ್ಗಿಲ್ ವಿಜಯೋತ್ಸವ ದಿನದಂದು ಯೋಧರ ಸ್ತಂಭಕ್ಕೆ ಮಾಲಾರ್ಪಣೆ ಮಾಡಿ ವೀರಾಜಪೇಟೆಯಲ್ಲಿರುವ ಸೇನಾ ಕ್ಯಾಂಟೀನ್‍ನಲ್ಲಿ ಮದ್ಯ ಮಾರಾಟ ಹಾಗೂ ಶೇಖರಣೆ ಮಾಡಲು ಅನುಮತಿ ನೀಡದ ಕಾರಣ ಆಗಸ್ಟ್ 15 ರಂದು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗುವದು ಎಂದು ಘೋಷಿಸಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ನಮ್ಮ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ತಮ್ಮ ಕಚೇರಿಯಿಂದ ರಾಜ್ಯ ಅಬಕಾರಿ ಆಯುಕ್ತರಿಗೆ ಆದೇಶಿಸಿದ ಪತ್ರದ ಪ್ರತಿ ಸಂಘಕೆ ತಲುಪಿದೆ. ಉದ್ದೇಶಿತ ಕಾರ್ಯ ಪ್ರಗತಿಯಲ್ಲಿರುವದರಿಂದ ಸಂಘದ ವತಿಯಿಂದ ಕೈಗೊಂಡ ನಿರ್ಧಾರದ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪಟ್ರಪಂಡ ರಮೇಶ್ ಕರುಂಬಯ್ಯ, ನಿರ್ದೇಶಕರಾದ ಚೇನಂಡ ಕಾರ್ಯಪ್ಪ, ಚಪ್ಪಂಡ ಹರೀಶ್ ಉತ್ತಯ್ಯ ಉಪಸ್ಥಿತರಿದ್ದರು.