ಸೋಮವಾರಪೇಟೆ, ಆ. 13: ಶತಮಾನ ಪೂರೈಸಿರುವ ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚಿಸಲಾಗಿದ್ದು, ಅಧ್ಯಕ್ಷರನ್ನಾಗಿ ಬಿ.ಟಿ. ತಿಮ್ಮಶೆಟ್ಟಿ ಹಾಗೂ ಗೌರವಾಧ್ಯಕ್ಷರನ್ನಾಗಿ ಮಾಜಿ ಶಾಸಕ ಬಿ.ಎ. ಜೀವಿಜಯ ಅವರನ್ನು ನೇಮಕ ಮಾಡಲಾಯಿತು.

ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಭೆಯಲ್ಲಿ ನೂತನವಾಗಿ ಸಂಘವನ್ನು ರಚಿಸಲಾಯಿತು. ಸಂಘದ ಉಪಾಧ್ಯಕ್ಷರಾಗಿ ಸಿ.ಎಂ. ಪುಟ್ಟಸ್ವಾಮಿ, ಕಾರ್ಯದರ್ಶಿಯಾಗಿ ಎಸ್.ಡಿ. ವಿಜೇತ್, ಖಜಾಂಚಿಯಾಗಿ ಎಂ.ಎಂ. ಸುರೇಶ್ ಅವರುಗಳನ್ನು ಆಯ್ಕೆಗೊಳಿಸಲಾಯಿತು.

ಗೌರವ ಕಾರ್ಯದರ್ಶಿಗಳಾಗಿ ಎಂ.ಜೆ. ಅಣ್ಣಮ್ಮ ಮತ್ತು ಪದಾಧಿಕಾರಿಗಳಾಗಿ ಬಿ.ಎಸ್. ಮಂಜುನಾಥ್, ಕೆ.ಎಸ್. ಗಣೇಶ್, ನ.ಲ. ವಿಜಯ, ಕೆ.ಕೆ. ಶೇಷಪ್ಪ, ಸಿ.ಡಿ. ನೆಹರು, ಕೆ.ಎನ್. ಶಿವಕುಮಾರ್, ಕೆ.ಎಸ್. ವೀರರಾಜು, ಸಂದ್ಯಾ ಡಿಸೋಜಾ, ಎಸ್.ಎ. ಮುರುಳೀಧರ, ಡಿ.ಪಿ. ಲೋಕೇಶ್, ರೇಣುಕ ಅವರುಗಳು ಆಯ್ಕೆಯಾದರು.