ಕುಶಾಲನಗರ, ಆ. 13: ದಿನಾಚರಣೆ ಹಿನೆÀ್ನಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ಸ್ಪೋಟಕ ನಿಗ್ರಹ ದಳದ ಸದಸ್ಯರು ಸೋಮವಾರಪೇಟೆ, ಕುಶಾಲನಗರ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳ ಶೋಧನಾ ಕಾರ್ಯ ಕೈಗೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನಿರ್ದೇಶನ ಮೇರೆಗೆ ಸ್ಥಳೀಯ ಡಿವೈಎಸ್ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ಸ್ಪೋಟಕ ನಿಗ್ರಹ ದಳದ ಎಆರ್‍ಎಸ್‍ಐ ಗಂಗಾಧರ್ ನೇತೃತ್ವದಲ್ಲಿ ಶ್ವಾನ ದಳ ಮತ್ತು ಬಾಂಬ್ ಡಿಟೆಕ್ಟರ್ ಬಳಸಿ ಶೋಧ ಕಾರ್ಯ ನಡೆಸಿದರು.

ಸೋಮವಾರಪೇಟೆ ತಾಲೂಕಿನ ಆಯಕಟ್ಟಿನ ಪ್ರದೇಶಗಳು, ಕುಶಾಲನಗರದ ಖಾಸಗಿ ಮತ್ತು ಸರಕಾರಿ ಬಸ್ ನಿಲ್ದಾಣ, ಕಾರು ನಿಲ್ದಾಣ, ರಥಬೀದಿ ಹಾಗೂ ಪ್ರವಾಸಿ ಕೇಂದ್ರಗಳಾದ ಹಾರಂಗಿ ಮತ್ತಿತರ ಕೇಂದ್ರಗಳಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲಾ ಸ್ಪೋಟಕ ನಿಗ್ರಹ ದಳದ ಪೃಥ್ವಿ ಶ್ವಾನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಭಯೋತ್ಪಾದನ ಚಟುವಟಿಕೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೈ ಅಲರ್ಟ್ ಘೋಷಣೆಯಾಗಿದ್ದು ಈ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುತ್ತಿದೆ.

ಸ್ಥಳೀಯ ಸಹಾಯಕ ಠಾಣಾಧಿಕಾರಿಗಳಾದ ಸಣ್ಣಯ್ಯ, ಮಾಚಯ್ಯ ಮತ್ತು ಸಿಬ್ಬಂದಿಗಳಾದ ಅನಿಲ್, ಪಾಟಿಲ್, ರಾಘವೇಂದ್ರ, ಶಿವ ಮತ್ತಿತರರು ಪಾಲ್ಗೊಂಡಿದ್ದರು.