ಮಡಿಕೇರಿ, ಆ.13: ದೇಶ ರಕ್ಷಣೆಗಾಗಿ ಹಗಲಿರುಳು ದುಡಿದು ನಿವೃತ್ತರಾಗುವ ಯೋಧರಿಗೆ ನಿವೃತ್ತಿ ಬದುಕಿನಲ್ಲಿ ಯಾವದೇ ಗೌರವ ಸಿಗುತ್ತಿಲ್ಲವೆಂದು ನಿವೃತ್ತ ಮೇಜರ್ ವೆಂಕಟಗಿರಿ ವಿಷಾದಿಸಿದರು.

ಕೊಡವ ಸಮಾಜದಲ್ಲಿ ನಡೆದ ಮಡಿಕೇರಿ ಮಾಜಿ ಸೈನಿಕರ ಸಂಘದ ವಾರ್ಷಿಕ ಮಹಾಸಭೆ ಮತ್ತು ಸೌಹಾದರ್À ಕೂಟವನ್ನು ಉದ್ಘಾಟಿಸಿದ ಮೇಜರ್ ವೆಂಕಟಗಿರಿ, ಸೇನೆಗೆ ಸೇರುವದೆಂದರೆ ಕುಟುಂಬ ಮತ್ತು ಸಮಾಜಕ್ಕೆ ಹೆಮ್ಮೆಯ ವಿಚಾರವಾಗಿದೆ. ದೇಶಕ್ಕಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಸೈನಿಕರು ಯಾವುದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸಲು ತಯಾರಾಗಿರಬೇಕಾದ ಪರಿಸ್ಥಿತಿ ಇದೆ. ಖಾಸಗಿ ಸಂಸ್ಥೆಗಳು ಅಥವಾ ಬ್ಯಾಂಕ್‍ಗಳು ದೇಶ ಸೇವೆ ಮಾಡಿದವರಿಗೆ ಸೂಕ್ತ ಸ್ಥಾನಮಾನ, ಹುದ್ದೆಯನ್ನು ನೀಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಸೆÉಕ್ಯೂರಿಟಿ ಗಾರ್ಡ್, ಸೂಪರ್‍ವೈಸರ್ ಹುದ್ದೆಗಳು ನಿವೃತ್ತ ಯೋಧರಿಗಾಗಿ ಕಾದಿರುತ್ತವೆ. ಯೋಧರ ಸಾಮಾಥ್ರ್ಯವನ್ನು ಇಲ್ಲಿಯವರೆಗೆ ಯಾರೂ ಅರ್ಥ ಮಾಡಿಕೊಂಡಿಲ್ಲ ಮತ್ತು ಗೌರವಿಸುತ್ತಿಲ್ಲವೆಂದು ಅಭಿಪ್ರಾಯಪಟ್ಟರು. ಸಂಘದ ಅಧ್ಯಕ್ಷ ಮಾಜಿ ಸೈನಿಕ ಆನಂದ್, ಉಪಾಧ್ಯಕ್ಷ ಗಣಪತಿ, ಕಾರ್ಯದರ್ಶಿ ಕಾವೇರಪ್ಪ, ಗೌರವ ಕಾರ್ಯದರ್ಶಿ ಮುತ್ತಣ್ಣ, ಸದಸ್ಯರುಗಳಾದ ಕುಟ್ಟಪ್ಪ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಸಂಘದ ಶ್ರೇಯಾಭಿವೃದ್ಧಿ ಮತ್ತು ನಿವೃತ್ತ ಯೋಧರ ಯೋಗಕ್ಷೇಮದ ಬಗ್ಗೆ ಚರ್ಚಿಸಲಾಯಿತು.