ಮಡಿಕೇರಿ, ಆ. 13: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವೀರಾಜಪೇಟೆ ಇದರ ವತಿಯಿಂದ ಮೂರ್ನಾಡು ವಲಯದ ಮರಗೋಡುವಿನಲ್ಲಿ ಬಾಳೆ ಕೃಷಿ ತರಬೇತಿ ನಡೆಯಿತು. ಬಾಳೆ ಕೃಷಿಯಲ್ಲಿ ಗೆಡ್ಡೆ ಆಯ್ಕೆ, ಬೀಜೋಪಚಾರ, ನಾಟಿ ಅಂತರ, ನಾಟಿ ವಿಧಾನ, ಗೊಬ್ಬರ ಕೊಡುವ ವಿಧಾನ, ರೋಗ ಕೀಟಗಳ ನಿರ್ವಹಣೆ, ಕಟಾವು ಆದಾಯ ಇವುಗಳ ಬಗ್ಗೆ ಸ್ಥಳೀಯ ಕೃಷಿಕರಾದ ಮಾಯ ಅವರು ಮಾಹಿತಿ ನೀಡಿದರು.
ತರಬೇತಿಯಲ್ಲಿ ಕೃಷಿ ಮೇಲ್ವಿಚಾರಕ ಎಂ. ಕುಶಾಲಪ್ಪ, ಮೇಲ್ವಿಚಾರಕಿ ಜಯಶ್ರೀ, ಒಕ್ಕೂಟದ ಅಧ್ಯಕ್ಷೆ ಸರೋಜಾ, ಸೇವಾ ಪ್ರತಿನಿಧಿ ಲತಾ, ಒಕ್ಕೂಟದ ಪದಾಧಿಕಾರಿಗಳು, ರೈತರು ಭಾಗವಹಿಸಿದ್ದರು.