ಶನಿವಾರಸಂತೆ, ಆ. 12: ಸಮೀಪದ ಕೊಡ್ಲಿಪೇಟೆ ಪಟ್ಟಣದಲ್ಲಿ ಕೆಲ ದಿನಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಅಲೆದಾಡುತ್ತಿದ್ದ ರವಿ (45) ಎಂಬ ಅನಾಥ ವ್ಯಕ್ತಿಯನ್ನು ರಕ್ಷಣಾ ವೇದಿಕೆ ಕೊಡ್ಲಿಪೇಟೆ ಘಟಕದ ಕಾರ್ಯಕರ್ತರು ರಕ್ಷಿಸಿ ಅಲ್ಲಿನ ಪೊಲೀಸ್ ಉಪ ಠಾಣೆಯ ಪೊಲೀಸ್ ಸಿಬ್ಬಂದಿ ರಮೇಶ್ ಅವರ ಸಹಕಾರದೊಂದಿಗೆ ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರವಿ ಭಾನುವಾರ ಮೃತಪಟ್ಟಿದ್ದು, ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಶನಿವಾರಸಂತೆ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ 08276-283333 ಅನ್ನು ಸಂಪರ್ಕಿಸಬಹುದಾಗಿದೆ.