ಗುಡ್ಡೆಹೊಸೂರು, ಆ. 12: ಇಲ್ಲಿನ ತರಕಾರಿ ಅಂಗಡಿ ಮಾಲೀಕರಾದ ಕೆ.ಟಿ. ಕುಮಾರ ಎಂಬವರ ಅಂಗಡಿಗೆ ಕಳೆದ ರಾತ್ರಿ ಬೀಗ ಮುರಿದು ಒಳನುಗ್ಗಿದ ಕಳ್ಳರು ರೂ. 300ನ್ನು ಕಳವು ಮಾಡಿದ್ದಾರೆ. ನಂತರ ಅಂಗಡಿಯಲ್ಲಿದ್ದ ಕಲ್ಲಂಗಡಿ ಹಣ್ಣನ್ನು ಕದ್ದು ಪಕ್ಕದಲ್ಲಿದ್ದ ಬಸ್ ತಂಗುದಾಣದಲ್ಲಿ ಕುಳಿತು ತಿಂದಿರುವದು ಕಂಡುಬಂದಿದೆ. ಅಲ್ಲದೆ ತರಕಾರಿ ಅಂಗಡಿಯ ಪಕ್ಕದ ಗಿರೀಶ್ ಅವರ ಕೋಳಿ ಅಂಗಡಿಗೆ ನುಗ್ಗಿ 10 ರೂ. ಕದ್ದು, ಪಕ್ಕದ ಮಟನ್ ಸ್ಟಾಲ್‍ಗೂ ನುಗ್ಗಿ ಅಲ್ಲಿದ್ದ ಕತ್ತಿಯನ್ನು ರಸ್ತೆಯಲ್ಲೆ ಬಿಟ್ಟು ಪರಾರಿಯಾಗಿದ್ದಾರೆ. ಕುಮಾರ ಅವರು ದೂರು ನೀಡಿದ ಹಿನ್ನಲೆ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನವೀನ್ ಗೌಡ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಬೀಗ ಮುರಿಯಲು ಬಳಸಿದ್ದ ಕಬ್ಬಿಣದ ತುಂಡನ್ನು ಕಳ್ಳರು ಅಲ್ಲಿಯೆ ಬಿಟ್ಟು ಪರಾರಿಯಾಗಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-ಗಣೇಶ್ ಕುಡೆಕಲ್