ವೀರಾಜಪೇಟೆ, ಆ. 11: ವಿಶ್ವ ಹಿಂದೂ ಪರಿಷದ್ ಭಜರಂಗದಳ ವೀರಾಜಪೇಟೆ ಶಾಖೆ ವತಿಯಿಂದ ತಾ. 14 ರಂದು ಅಖಂಡ ಭಾರತ ಸಂಕಲ್ಪ ದಿನವನ್ನು ಬಿಟ್ಟಂಗಾಲದ ಹೆಗ್ಗಡೆ ಸಮಾಜದಲ್ಲಿ ಸಂಜೆ 8 ಗಂಟೆಗೆ ಹಮ್ಮಿ ಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷದ್ನ ಜಿಲ್ಲಾಧ್ಯಕ್ಷ ಮಾತಂಡ ಟಾಟಾ ಬೋಪಯ್ಯ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೋಪಯ್ಯ ಅವರು, ಸಂಕಲ್ಪ ದಿನವನ್ನು ವೀರಾಜಪೇಟೆಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಪಟ್ಟಣ ಪಂಚಾಯಿತಿ ಚುನಾವಣೆ ಪ್ರಯುಕ್ತ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಿಟ್ಟಂಗಾಲದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವದು. ಬಿಟ್ಟಂಗಾಲಕ್ಕೆ ಅಂದು ರಾತ್ರಿ 7 ಗಂಟೆಗೆ ಬಿಟ್ಟಂಗಾಲದ ಮುತ್ತಪ್ಪ ದೇವಾಲಯ ದಿಂದ ಹೆಗ್ಗಡೆ ಸಮಾಜದವರೆಗೆ ಪಂಜಿನ ಮೆರವಣಿಗೆ ನಡೆಸಲಾಗು ವದು. 8 ಗಂಟೆಗೆ ಹೆಗ್ಗಡೆ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ನಿವೃತ್ತ ಮೇಜರ್ ವೆಂಕಟ್ ಗಿರಿ ವಹಿಸಲಿ ದ್ದಾರೆ. ಮುಖ್ಯ ಭಾಷಣಕಾರರಾಗಿ ವಿಶ್ವ ಹಿಂದೂ ಪರಿಷದ್ನ ಮಂಗಳೂರು ವಿಭಾಗದ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಭಾಗವಹಿಸಲಿದ್ದಾರೆ. ಎಂದರು.
ಗೋಷ್ಠಿಯಲ್ಲಿ ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಡಿ. ನರಸಿಂಹ, ತಾಲೂಕು ಅಧ್ಯಕ್ಷ ಸಣ್ಣುವಂಡ ಗಣೇಶ್ ಮೇದಪ್ಪ, ನಗರ ಅಧ್ಯಕ್ಷ ಪೊನ್ನಪ್ಪ ರೈ, ಭಜರಂಗ ದಳದ ತಾಲೂಕು ಸಂಚಾಲಕ ವಿವೇಕ್ ರೈ, ನಗರ ಸಂಚಾಲಕ ದಿನೇಶ್ ನಾಯರ್ ಹಾಜರಿದ್ದರು.