ಸಿದ್ದಾಪುರ, ಆ. 11: ಸುನ್ನಿ ಬಾಲ ವೇದಿಕೆ ವತಿಯಿಂದ ಮುನ್ವರಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಿಗೆ ಸಮಸ್ತ ಕೇಂದ್ರೀಯ ಜಂಇಯ್ಯತ್ತುಲ್ ಮುಆಲ್ಲಮೀನ್ ಸಂಸ್ಥೆಯ 60ನೇ ವಾರ್ಷಿಕೋತ್ಸವ ಅಂಗವಾಗಿ ಹೂವು ಹಾಗೂ ಹಣ್ಣಿನ ಗಿಡಗಳನ್ನು ವಿತರಣೆ ಮಾಡಲಾಯಿತು.

ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮದರಸದ ಮುಖ್ಯ ಉಪಾಧ್ಯಾಯ ಆರೀಫ್ ಫೈಝಿ, ನೌಫಲ್ ಹುದವಿ, ಮೊಹಿದ್ದೀನ್, ಯೂಸೂಫ್ ಮುಸ್ಲಿಯಾರ್, ಕರೀಂ ಮುಸ್ಲಿಯಾರ್, ಆಲವಿ ಮುಸ್ಲಿಯಾರ್, ಸಮಿತಿಯ ಪದಾಧಿಕಾರಿಗಳಾದ ಅಬ್ದುಲ್ ಕರೀಂ, ಅಸ್ಕರ್, ರಾಶೀದ್ ತನ್ವೀರ್ ಇತರರು ಹಾಜರಿದ್ದರು.