ಸೋಮವಾರಪೇಟೆ, ಆ. 11: ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನೂತನವಾಗಿ ಮೂವರನ್ನು ನಾಮನಿರ್ದೇಶನ ಮಾಡಲಾಗಿದೆ.
ತಾಲೂಕು ಸಂಘದ ನೂತನ ಅಧ್ಯಕ್ಷ ಹೆಚ್.ಆರ್. ಹರೀಶ್ಕುಮಾರ್ ಅಧ್ಯಕ್ಷತೆಯಲ್ಲಿ ಪತ್ರಿಕಾಭವನದಲ್ಲಿ ನಡೆದ ಆಡಳಿತ ಮಂಡಳಿ ವಿಶೇಷ ಸಭೆಯಲ್ಲಿ ಸೋಮವಾರಪೇಟೆಯ ಕವನ್ಕಾರ್ಯಪ್ಪ, ಕುಶಾಲನಗರದ ಶಿವರಾಜ್ ಮತ್ತು ಸುಂಟಿಕೊಪ್ಪದ ವಹೀದ್ಜಾನ್ ಅವರುಗಳನ್ನು ಸಂಘದ ನಾಮನಿರ್ದೇಶನ ನಿರ್ದೇಶಕರುಗಳನ್ನಾಗಿ ಆಯ್ಕೆ ಮಾಡಲಾಯಿತು.
ಇದರೊಂದಿಗೆ ಸಂಘದ ಉಪಾಧ್ಯಕ್ಷರನ್ನಾಗಿ ಎಂ.ಎನ್. ಚಂದ್ರಮೋಹನ್, ಜಂಟಿ ಕಾರ್ಯದರ್ಶಿಯನ್ನಾಗಿ ತೇಜಸ್ ಪಾಪಯ್ಯ ಅವರುಗಳನ್ನು ನೇಮಕ ಮಾಡಲಾಯಿತು. ನೂತನ ಸಾಲಿನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭವನ್ನು ತಾ.18ರಂದು ಪತ್ರಿಕಾಭವನದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಎಸ್. ಮಹೇಶ್, ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ನಿರ್ದೇಶಕರಾದ ವನಿತ ಚಂದ್ರಮೋಹನ್, ಕುಂಬೂರು ವಿಶ್ವ, ಮಾಲಂಬಿ ದಿನೇಶ್, ಕೆ.ಎಸ್.ಮೂರ್ತಿ ಅವರುಗಳು ಉಪಸ್ಥಿತರಿದ್ದರು.