ಸೋಮವಾರಪೇಟೆ, ಆ. 11: ಶ್ರೀನಾರಾಯಣ ಗುರು ಸೇವಾ ಸಮಿತಿ ಹಾಗೂ ತುಳುನಾಡು ಬಿಲ್ಲವ ಮಹಿಳಾ ಸಂಘದ ಆಶ್ರಯದಲ್ಲಿ ತಾ. 12ರಂದು (ಇಂದು) ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ 6ನೇ ವರ್ಷದ ಆಟಿ ಸಂಭ್ರಮೋತ್ಸವ ಸಮಾರಂಭ ನಡೆಯಲಿದೆ.

ಬೆಳಿಗ್ಗೆ 9.30ಗಂಟೆಗೆ ಕಾರ್ಯಕ್ರಮವನ್ನು ಸಮಿತಿಯ ಮಾಜಿ ಪ್ರ. ಕಾರ್ಯದರ್ಶಿ ಬಿ.ಟಿ. ರವಿ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಬಿ.ಎ. ಭಾಸ್ಕರ್ ವಹಿಸಲಿದ್ದಾರೆ. ಸಂಭ್ರಮಾಚರಣೆಯ ಅಂಗವಾಗಿ ಜನಾಂಗ ಬಾಂಧವರಿಗಾಗಿ ವಿವಿಧ ಹಂತದಲ್ಲಿ ಸಾಂಸ್ಕøತಿಕ ಸ್ಪರ್ಧೆಗಳು ಹಾಗೂ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದೆ.

ಅಪರಾಹ್ನ 2.30ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಮಿತಿಯ ಗೌರವಾಧ್ಯಕ್ಷ ಸಿ. ಲಕ್ಷ್ಮಣ್ ಪೂಜಾರಿ, ಉದ್ಯಮಿಗಳಾದ ಬಿ.ಎಸ್. ಸುಂದರ್, ಬಿ.ಎಸ್. ಶ್ರೀಧರ್, ಬಿ.ಎಸ್. ಸದಾನಂದ್, ಟಿ.ಸಿ. ಮೋಹನ್, ಜಿ.ಪಂ. ಮಾಜೀ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಆನಂದ್ ರಘು ಭಾಗವಹಿಸಲಿದ್ದಾರೆ.

ಬಂಟರ ಸಂಘದಿಂದ: ತಾಲೂಕು ಬಂಟರ ಯಾನೆ ನಾಡವರ ಸಂಘದ ವತಿಯಿಂದ ತಾ.12ರಂದು (ಇಂದು) ಜನಾಂಗ ಬಾಂಧವರಿಗಾಗಿ ಇಲ್ಲಿನ ಕೊಡವ ಸಮಾಜದಲ್ಲಿ "ಆಟಿದ ಕೂಟ" ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಬಿ.ಜನಾರ್ಧನಶೆಟ್ಟಿ ತಿಳಿಸಿದ್ದಾರೆ.

ಬೆಳಿಗ್ಗೆ 10ಗಂಟೆಗೆ ಕಾರ್ಯಕ್ರಮ ವನ್ನು ಮಡಿಕೇರಿಯ ಉದ್ಯಮಿ ಐತಪ್ಪ ರೈ ಉದ್ಘಾಟಿಸಲಿದ್ದಾರೆ. ಪುತ್ತೂರು, ಹಾರಾಡಿಯ ಪ್ರಶಾಂತ್ ಅನಂತಾಡಿ ಮುಖ್ಯ ಭಾಷಣ ಮಾಡಲಿದ್ದು, ಅತಿಥಿಗಳಾಗಿ ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ನಾರಾಯಣ ರೈ, ಬೆಂಗಳೂರಿನ ಉದ್ಯಮಿ ಕಾರ್ತಿಕ್ ಶೆಟ್ಟಿ, ಕುಶಾಲನಗರ ಆರತಿ ಹೆಲ್ತ್ ಕೇರ್ ಸೆಂಟರ್‍ನ ಡಾ.ಹರಿ ಎ.ಶೆಟ್ಟಿ, ಉದ್ಯಮಿ ಹಟ್ಟಿಹೊಳೆ ನಾರಾಯಣಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ.

ಬೆಳಿಗ್ಗೆ 9 ಗಂಟೆಯಿಂದ ಜನಾಂಗದ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಸಂಜೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.