ಮಡಿಕೇರಿ, ಆ. 10: ಕಡಗದಾಳು ನಿವಾಸಿ ಬಿ. ಸುಂದರಿ (80) ಎಂಬವರು ತಾ. 7 ರಂದು ಮನೆಯಿಂದ ಕಾಣೆಯಾಗಿರುವ ಬಗ್ಗೆ ವೃದ್ಧೆಯ ಪುತ್ರಿ ಗೀತಾ ರಮೇಶ್ ಪೊಲೀಸ್ ಪುಕಾರು ನೀಡಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಕೆ ಬಗ್ಗೆ ಮಾಹಿತಿ ಲಭಿಸಿದರೆ ಪೊಲೀಸ್ ಕಂಟ್ರೋಲ್ ರೂಂ 08272-228330 ಗೆ ತಿಳಿಸಲು ಕೋರಲಾಗಿದೆ.