*ಗೋಣಿಕೊಪ್ಪ, ಆ. 10 : ಕಳೆದ ವರ್ಷ ಭತ್ತದ ಕಟಾವು ಸಂದರ್ಭ ಧಾಳಿ ನಡೆಸಿ ರೈತರನ್ನು ಸಂಕಷ್ಟಕ್ಕೆ ತಳ್ಳುತ್ತಿದ್ದ ಸೈನಿಕ ಹುಳು ಮುಂಚಿತ ವಾಗಿಯೇ ಸಸಿ ಮಡಿ ಅಂತದಲ್ಲಿ ಧಾಳಿ ಇಡುತ್ತಿರುವದು ಕೃಷಿಕರಲ್ಲಿ ಆತಂಕ ಮೂಡಿಸುತ್ತಿದೆ.
ಮೈಸೂರು ಜಿಲ್ಲೆಯಲ್ಲಿ ಕಾಣಿಸಿ ಕೊಂಡಿರುವ ಸೈನಿಕ ಹುಳು ಕೊಡಗಿನಲ್ಲಿಯೂ ತನ್ನ ಅಟ್ಟಹಾಸ ಮುಂದುವರಿಸಿದೆ ಇದರ ಪರಿಣಾಮ ರೈತರಿಗೆ ತೀವ್ರ ಸಂಕಷ್ಟ ತಂದಿದೆ. ಇದರ ನಿರ್ನಾಮಕ್ಕೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ
ಮಳೆಯ ತೀವ್ರತೆಯಿಂದ ನಾಟಿ ಮಾಡಿದ ಪೈರು ಕೊಳೆತು ಹೋಗುತ್ತಿದೆ ಇಂತಹ ಸ್ಥಿತಿಯಲ್ಲಿ ಸೈನಿಕ ಹುಳುವಿನ ಬಾಧೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ. ಸೈನಿಕ ಹುಳು ಕೀಟವು ಹಗಲು ವೇಳೆಯಲ್ಲಿ ಮಣ್ಣು, ಕಾಂಡದ ಮಧ್ಯ ಮತ್ತು ಗರಿಗಳ ತಳಭಾಗದಲ್ಲಿ ವಾಸಿಸುತ್ತವೆ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಇದರ ಚಟುವಟಿಕೆ ಕ್ರಿಯಾಶೀಲವಾಗುತ್ತದೆ.
ಈ ಕೀಟವು ಭತ್ತದ ಬೆಳೆಯ ಎಲೆ ಮತ್ತು ತೆನೆಯನ್ನು ಕತ್ತರಿಸುವ ಕಾರ್ಯ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಕಂಡುಬರುತ್ತದೆ. ಹಗಲಿನ ಹೊತ್ತಿನಲ್ಲಿ ಈ ಕೀಟದ ಕಾರ್ಯಚಟುವಟಿಕೆ ಕಣ್ಣಿಗೆ ಕಾಣದಂತಾಗಿ ರೈತರಲ್ಲಿ ಆತಂಕ ಪಡುವ ಪರಿಸ್ಥಿತಿಯನ್ನು ಈ ಕೀಟವು ತರುತ್ತದೆ. ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಮಾತ್ರ ಕಾಣಸಿಗುತ್ತದೆ. ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾg.É
ಸೈನಿಕ ಹುಳುವಿನ ಬಾದೆಯನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರವು ಸೂಚಿಸಿದೆ ಹತೋಟಿ ಕ್ರಮಗಳಂತೆ ದೀಪಗಳಿಗೆÀ ಪತಂಗವು ಆಕರ್ಷಣೆಯಾಗುವದರಿಂದ ರಾತ್ರಿ ವೇಳೆ ದೀಪದ ಬಲೆಯನ್ನು ಅಳವಡಿಸ ಬೇಕು. ಜಮೀನಿನ ಸುತ್ತಾ ಒಂದು ಅಡಿ ಆಳ ಗುಂಡಿ ತೆಗೆದು ಅದಕ್ಕೆ ಎಲೆಗಳಿಂದ ಮುಚ್ಚುವದರಿಂದ ಹಗಲಿನಲ್ಲಿ ಮರಿಗಳು ಬಂದು ಶೇಖರಣೆ ಯಾಗುತ್ತವೆÉ. ಗುಂಡಿಗಳಿಗೆ ರಾಸಾಯನಿಕ ಸಿಂಪರಣೆ ಮಾಡಿ ಮರಿಗಳನ್ನು ಬಹುಭಾಗ ನಾಶಪಡಿಸ ಬಹುದು. ಗುಂಡಿಗೆ ಬೂದಿಯನ್ನು ಹಾಕುವದ ರಿಂದ ಹುಳುಗಳ ಚಲನೆಯನ್ನು ನಿಯಂತ್ರಿಸ ಬಹುದು. ಈ ಕೀಟದ ಭಾದೆ ನರ್ಸರಿ ಅಥವಾ ಗದ್ದೆಗಳಲ್ಲಿ ಕಂಡು ಬಂದರೆ ಸಂಜೆ ವೇಳೆಯಲ್ಲಿ ಅಂದರೆ ಸಾಯಂಕಾಲ 5.30ರ ನಂತರ ಕ್ಲೋರೊಪೈರಿಫಾಸ್ + ಸೈಪರ್‍ಮೆತ್ರಿನ್ (ಆಮ್ಲಾ) ಎಂಬ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ 2.0 ಮಿ.ಲಿ. ಯಂತೆ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು. ಸಿಂಪರಣೆ ಯನ್ನು ಸಂಜೆ ಹೊತ್ತಿನಲ್ಲಿ ಮಾಡಿದರೆ ಉತ್ತಮ.
50 ಕೆ.ಜಿ ಭತ್ತದ ತೌಡನ್ನು ತೆಗೆದು ಕೊಂಡು ಅದಕ್ಕೆ 5 ಕೆ.ಜಿ ಬೆಲ್ಲವನ್ನು 5 ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ತಯಾರಿಸಿದ ಪಾಕವನ್ನು ಸೇರಿಸಬೇಕು. ನಂತರ ಅದಕ್ಕೆ 10 ಲೀಟರ್ ನೀರಿನೊಡನೆ ಮಿಶ್ರಣ ಮಾಡಿ 12 ಗಂಟೆಗಳ ಕಾಲ ನೆನೆಸಿಟ್ಟು, ನಂತರ ಅದಕ್ಕೆ 600 ಮಿ.ಲಿ ಮೋನೋಕ್ರೋ ಟೊಫಾಸ್ ಎಂಬ ಕೀಟನಾಶಕವನ್ನು ಸೇರಿಸಿ ಮಿಶ್ರಣ ಮಾಡಿದ ಪುಡಿಯನ್ನು ಸಂಜೆ ವೇಳೆಯಲ್ಲಿ (5.30 ನಂತರ) ಗದ್ದೆಗೆ ಎರಚಬೇಕು. ಇದರಿಂದ ಸೈನಿಕ ಹುಳುಗಳು ಈ ವಿಷಮಿಶ್ರಿತ ಅಹಾರಕ್ಕೆ ಆಕರ್ಷಣೆಗೊಂಡು ಅದನ್ನು ತಿಂದು ಸಾಯುತ್ತವೆ ಎಂದು ಮಾಹಿತಿ ನೀಡಿದ್ದಾರೆ.