ಕುಶಾಲನಗರ/ ಕೂಡಿಗೆ, ಆ. 10: ಕೂಡಿಗೆ ಸೈನಿಕ ಶಾಲೆಯಲ್ಲಿ ಭಾರತೀಯ ಸೇನೆಯಿಂದ ಕೊಡುಗೆ ರೂಪದಲ್ಲಿ ದೊರೆತ ಯುದ್ಧ ಟ್ಯಾಂಕ್ (ಖಿ55)ನ ಉದ್ಘಾಟನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೇಜರ್ ಜನರಲ್ ವಿ ಪಿ ಎಸ್ ಭಕುನಿ, ವಿ ಎಸ್ ಎಂ(ನಿವೃತ್ತ) ಇವರು ಆಗಮಿಸಿದ್ದರು. ಶಾಲೆಯ ವಿದ್ಯಾರ್ಥಿಗಳನ್ನೊಳಗೊಂಡ ಅಶ್ವದಳವು ಮುಖ್ಯ ಅತಿಥಿಗಳನ್ನು ಬರಮಾಡಿಕೊಂಡಿತು. ಶಾಲೆಯ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನೇರವಾಗಿ ಈ ಯುದ್ಧ ಟ್ಯಾಂಕ್ನ್ನು ನೋಡುತ್ತಿರು ವದರಿಂದ, ಎಲ್ಲಾ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮವು ರೋಮಾಂಚನ ಅನುಭವವಾಗಿ ರುವದರ ಜೊತೆಗೆ ಕುತೂಹಲಭರಿv Àವಾಗಿದ್ದಿತು. ಈ ಯುದ್ಧ ಟ್ಯಾಂಕ್ 1950ರಲ್ಲಿ ರಷ್ಯಾ ಸೇನೆಯ ಸೇವೆಗೆ ಸೇರ್ಪಡೆಗೊಂಡಿದ್ದು, ನಂತರ 1960ರಲ್ಲಿ ಭಾರತೀಯ ಸೇನೆಯ ಸೇವೆಗೆ ಸೇರ್ಪಡೆಗೊಂಡಿತು. ಇದು ಸೋವಿಯತ್ ಯೂನಿಯನ್ನಿಂದ ಭಾರತೀಯ ಸೇನೆಗೆ ಕೊಡಗೆಯಾಗಿ ನೀಡಲ್ಪಟ್ಟ ಮೊದಲನೆಯ ಯುದ್ಧ ಟ್ಯಾಂಕ್ ಆಗಿದೆ. ಜೊತೆಗೆ ಈ ಯುದ್ಧ ಟ್ಯಾಂಕ್ 1971ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಪಂಜಾಬ್ ಪ್ರಾಂತ್ಯದ ಫಜಿಲ್ಕಾ ಜಿಲ್ಲೆಯಲ್ಲಿ ಶತ್ರುಗಳನ್ನು ಎದುರಿಸಲು ನಿಯೋಜಿಸಲ್ಪಟ್ಟಿದ್ದಿತು. ಈ ಯುದ್ಧ ಟ್ಯಾಂಕ್ನ ವಿಶೇಷತೆಯೆಂದರೆ, ಇದು 100ಎಂ ಎಂ ಟ್ಯಾಂಕ್ಗನ್ ಹೊಂದಿದ್ದು, 14 ಕಿ. ಮೀ. ವ್ಯಾಪ್ತಿ ಯಲ್ಲಿ ತನ್ನ ಗುರಿಯನ್ನು ತಲಪುವ ಸಾಮಥ್ರ್ಯವುಳ್ಳದ್ದಾಗಿದೆ. ಇದರೊಂದಿಗೆ 7.62ಎಂ ಎಂ ಹಾಗೂ 12.7 ಎಂ ಎಂ ಮೆಷಿನ್ ಗನ್ಗಳನ್ನು ಒಳ ಗೊಂಡಿದ್ದು, ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಸಾಮಥ್ರ್ಯ ವುಳ್ಳದ್ದಾಗಿದೆ.
ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್ ಆರ್ ಲಾಲ್ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಮುಖ್ಯ ಅತಿಥಿಗಳನ್ನು ಸ್ವಾಗತಿಸಿ, ಅವರ ಕಿರು ಪರಿಚಯ ಮಾಡಿದರು. ನಂತರ ಯುದ್ಧ ಟ್ಯಾಂಕ್(ಖಿ55)ನ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಖ್ಯ ಅತಿಥಿಗಳು, ಶಾಲೆಯು ವಿದ್ಯಾರ್ಥಿಗಳಿಗೆ ನೀಡಿರುವ ಸೌಲಭ್ಯ ಮತ್ತು ಜವಾಬ್ದಾರಿಗಳನ್ನು ಕುರಿತು ಪ್ರಶಂಶಿಸಿದರು. ಎನ್ಡಿಎ ಮತ್ತು ಇತರೆ ಸೇನಾ ವಿಭಾಗಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿ ಕೊಡುವದರಲ್ಲಿ
(ಮೊದಲ ಪುಟದಿಂದ) ಸೈನಿಕ ಶಾಲೆಗಳ ಪಾತ್ರ ಮಹತ್ವದ್ದು ಎಂದು ಹೇಳಿದರು. ಭಾರತೀಯ ಸೇನೆಯು ಭಾರತದ ಗಡಿ ಪ್ರದೇಶವನ್ನು ರಕ್ಷಿಸುವಲ್ಲಿ ವಹಿಸಿರುವ ಪಾತ್ರವನ್ನು ಅವರು ಪುನರುಚ್ಛರಿಸಿದರು. ಸೈನಿಕ ಶಾಲೆಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಶಾಲೆಯಲ್ಲಿ ಏಳು ವರ್ಷಗಳ ಶಿಕ್ಷಣವನ್ನು ಪೂರೈಸಿದ ನಂತರ ಸೇನಾ ಅಧಿಕಾರಿಯಾಗುವ ಎಲ್ಲಾ ಸಾಮಥ್ರ್ಯಗಳನ್ನೂ ಹೊಂದಿದ್ದು, ತೆರೆದ ಮನಸ್ಸನ್ನು ಹೊಂದಿ ಕೇಂದ್ರಿಕೃತ ಗುರಿಯತ್ತ ಮುನ್ನಡೆದರೆ ತಾವಂದುಕೊಂಡ ಗುರಿಯನ್ನು ತಲಪಬಹುದೆಂದು ಕಿವಿಮಾತು ಹೇಳಿದರು. ಈ ಕಾರ್ಯಕ್ರಮದ ನಂತರ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಮುಖ್ಯ ಅತಿಥಿಗಳು ಸಂವಾದವನ್ನು ನಡೆಸಿದರು. ಈ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳಾದ ತಾವುಗಳು ಹೇಗೆ ತಮ್ಮ ನೈಜ ಸಾಮಥ್ರ್ಯವನ್ನು ಎಸ್ ಎಸ್ ಬಿ ಸಂದರ್ಶನದ ಸಂದರ್ಭದಲ್ಲಿ ಸಮರ್ಥವಾಗಿ ತೋರ್ಪಡಿಸಬೇಕು ಎಂಬದನ್ನು ಕುರಿತು ಸಲಹೆ ಮತ್ತು ಮಾರ್ಗದರ್ಶನವನ್ನು ನೀಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಗ್ರೂಪ್ ಕ್ಯಾಪ್ಟನ್ ಆರ್ ಆರ್ ಲಾಲ್, ಉಪ ಪ್ರಾಂಶುಪಾಲರಾದ ಲೆಫ್ಟಿನೆಂಟ್ ಕರ್ನಲ್ ಸೀಮಾ ತ್ರಿಪಾಠಿ, ಆಡಳಿತಾಧಿಕಾರಿಗಳಾದ ಸ್ಕ್ವಾಡ್ರನ್ ಲೀಡರ್ ಡಿ ಮ್ಯಾಥ್ಯು, ಹಿರಿಯ ಶಿಕ್ಷಕ ಸೂರ್ಯನಾರಾಯಣ ಎಸ್, ಬೋಧಕ, ಬೋಧಕೇತರ ವರ್ಗದವರು ಮತ್ತು ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.