ಸಿದ್ದಾಪುರ, ಆ. 10: ವೀರಾಜಪೇಟೆ ತಾಲೂಕು ಛಾಯಾಚಿತ್ರಕಾರರ ಸಂಘದ ಅಧ್ಯಕ್ಷರಾಗಿ ಗೋಣಿಕೊಪ್ಪಲು ಕೂರ್ಗ್ ಡಿಜಿಟಲ್ ಸ್ಟುಡಿಯೋ ಮಾಲೀಕ ಮೈಕಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ಅಧ್ಯಕ್ಷ ಸುನೀಲ್ ಅಧ್ಯಕ್ಷತೆಯಲ್ಲಿ ಗೋಣಿಕೊಪ್ಪಲುವಿನಲ್ಲಿ ನಡೆದ ಸಂಘದ ಮಹಾಸಭೆಯಲ್ಲಿ ಉಪಾಧ್ಯಕ್ಷರಾಗಿ ನಾಸಿರ್, ಕಾರ್ಯದರ್ಶಿಯಾಗಿ ಶರತ್ ಜಗನ್ನಿವಾಸ್, ಖಜಾಂಚಿಯಾಗಿ ಡಿ.ಸಿ ರವಿಂದ್ರ ಹಾಗೂ ನಿರ್ದೇಶಕರುಗಳಾಗಿ ರವಿ (ವೀರಾಜಪೇಟೆ), ಅರುಣ, ಶಿವಾ, ಮಂಜು, ದಿನೇಶ್, ಸುರೇಶ್, ವಿಜು, ರವಿ ಮತ್ತಿತರರು ಆಯ್ಕೆಯಾಗಿದ್ದಾರೆ.