ಕುಶಾಲನಗರ, ಆ. 10: ಕುಶಾಲನಗರ ಸಮೀಪದ ಕೊಪ್ಪ ಗ್ರಾಮದ ಗುಡ್ಡೇನಹಳ್ಳಿ ಶ್ರೀ ಚೌಡಮ್ಮ ದೇವರ ವಾರ್ಷಿಕ ಪೂಜೋತ್ಸವ ನಡೆಯಿತು. ಅರ್ಚಕ ಹರಿಪ್ರಸಾದ್, ರವಿಕುಮಾರ್ ನೇತೃತ್ವದಲ್ಲಿ ಗಣಪತಿ ಹೋಮ, ಪೂಜಾ ವಿಧಿ ವಿಧಾನಗಳು ಜರುಗಿದವು.

ದೇವಾಲಯ ಸಮಿತಿಯ ಪ್ರಮುಖರಾದ ಅಶ್ವಿನ್, ಸುರೇಶ್, ಕೊಪ್ಪ ಗ್ರಾ.ಪಂ. ಸದಸ್ಯರಾದ ಸಾವಿತ್ರಿ, ಕೆ.ಕೆ. ರಾಮಸ್ವಾಮಿ, ತಾಪಂ ಸದಸ್ಯೆ ಜಯಂತಿ, ಸೋಮಶೇಖರ್ ಮತ್ತಿತರರು ಇದ್ದರು.