ಮಡಿಕೇರಿ, ಆ. 9: 48 ಗಂಟೆಗಳ ಸತತ ಮಳೆಯ ಬಳಿಕ ಇಂದು ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡುಬಂದರೂ ರೈತರ ಮೊಗದಲ್ಲಿ ಆತಂಕ ಗೋಚರಿಸತೊಡಗಿದೆ. ಭತ್ತ ಸಹಿತ ಎಲ್ಲ ಫಸಲು ಹಾಗು ವಾಣಿಜ್ಯ ಬೆಳೆಗಳಿಗೆ ಕೊಳೆ ರೋಗದ ಆತಂಕ ಭಾದಿಸುವಂತಾಗಿದೆ.ಕೂಡಿಗೆ : ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಹಾರಂಗಿ ಜಲಾಶಯ ಭರ್ತಿಯಾಗಿ, ಅಣೆಕಟ್ಟೆಯಿಂದ ನದಿಗೆ 6086ಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರ ಜೊತೆಯಲ್ಲಿ ಕಾವೇರಿ ನದಿಯು ತುಂಬಿ ನೀರು ಹರಿಯುತ್ತಿದ್ದು, ಹಾರಂಗಿ-ಕಾವೇರಿ ನದಿಗಳು ಕೂಡಿಗೆಯಲ್ಲಿ ಸಂಗಮವಾಗಿ ಶ್ರೀ ರಾಮಲಿಂಗೇಶ್ವರ ಶುಂಠಿ ಬೆಳೆ ನೀರಿನಿಂದ ಆವರಿಸಿ ಹೊಳೆಯಂತೆ ಕಾಣುತ್ತಿದೆ. ಹೆಬ್ಬಾಲೆ ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಜ್ಯ ಹೆದ್ದಾರಿ ಸಮೀಪದ ಗದ್ದೆಹಳ್ಳ ಎಂಬ ಗ್ರಾಮದ ಸಮೀಪ ನದಿಯ ನೀರಿನ ಮಟ್ಟ ಹೆಚ್ಚಾಗಿ ಭತ್ತದ ಸಂಪೂರ್ಣ ನಾಶವಾಗುವ ಆತಂಕ ಎದುರಾಗಿದೆ ತುಂಬದ ಆನೆಕೆರೆ ಜಿಲ್ಲೆಯಲ್ಲಿ ಅತಿಯಾಗಿ ಮಳೆ ಬೀಳುತ್ತದೆ. ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನತ್ತ್ತೂರು ಗ್ರಾಮದ ಆನೆಕರೆಯು 20 ಎಕರೆ ವಿಸ್ತೀರ್ಣವಾಗಿದೆ. ಆದರೆ ಈ ಆನೆಕರೆಯು ಒತ್ತುವರಿಯಾಗಿ ಕೇವಲ 4 ಎಕರೆ ಉಳಿದಿದೆ. ಈ ಕೆರೆಯಿಂದ ಈ ವ್ಯಾಪ್ತಿಯ ನೂರಾರು ರೈತರು ನೀರನ್ನು ಬಳಸುವ ಮೂಲಕ ವ್ಯವಸಾಯ ಮಾಡುತ್ತಿದ್ದರು. ಕೆರೆಗೆ ಬರುವ ಜಲ ಮೂಲಗಳೇ ಕಡಿತಗೊಂಡು ವಿಪರೀತ ಮಳೆ ಬಿದ್ದರೂ ಸಹ ಕೇವಲ 1 ಅಡಿ ನೀರು ಕೆರೆಗೆ ಬಂದಿಲ್ಲ. ಈ ಕೆರೆಯು ತುಂಬಿದರೆ ಈ ಭಾಗದಲ್ಲಿ ಅಂತರ್‍ಜಲ ಹೆಚ್ಚುವದರಿಂದ ಕುಡಿಯುವ ನೀರಿನ ಸಮಸ್ಯೆ ಬರುವದಿಲ್ಲ ಎಂದು ಈ ಭಾಗದ ರೈತರ ಆಸೆ ಆಗಿದೆ. ಈ ಭಾಗದ ಕೆರೆ ತುಂಬದೆ. ಗಾಮಸ್ಥರಲ್ಲಿ ಬಹಳಷ್ಟು ಆತಂಕ ಉಂಟಾಗಿದೆ.

(ಮೊದಲ ಪುಟದಿಂದ)

ಕೊಳೆರೋಗದಿಂದ ಚಿಂತೆ

ಸೋಮವಾರಪೇಟೆ : ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕೃಷಿ ಫಸಲು ಸಂಪೂರ್ಣ ನಷ್ಟಕ್ಕೊಳಗಾಗುತ್ತಿದ್ದು, ರೈತಾಪಿ ವರ್ಗ ಚಿಂತಾಕ್ರಾಂತರಾಗಿದ್ದಾರೆ.

ಕಳೆದ 30 ವರ್ಷಗಳ ಹಿಂದಿನ ಮಳೆಯನ್ನು ನೆನಪಿಸುವಂತೆ ಬೀಳುತ್ತಿರುವ ಮಳೆಗೆ ಪ್ರಸಕ್ತ ವರ್ಷ ಜನಜೀವನ ಅಸ್ತವ್ಯಸ್ಥಗೊಂಡಿದೆ. ದಿನದ 24 ಗಂಟೆ ಮಳೆ ಸುರಿದಿದೆ.

ತಾಲೂಕಿನ ಪ್ರಮುಖ ಬೆಳೆಯಾದ ಕಾಫಿ, ಕರಿಮೆಣಸು, ಶುಂಠಿನೊಂದಿಗೆ ಭತ್ತದ ಕೃಷಿಗೆ ಮಳೆ ಮಾರಕವಾಗಿ ಪರಿಣಮಿಸಿದ್ದು, ಕೊಳೆ ರೋಗಕ್ಕೆ ತುತ್ತಾಗಿ ಫಸಲು ನೆಲಕಚ್ಚುತ್ತಿದೆ. ಹರಗ ವ್ಯಾಪ್ತಿಗೆ ಈಗಾಗಲೇ 182 ಇಂಚು ಮಳೆಯಾಗಿದ್ದು, ಕಾಫಿಗೆ ಕೊಳೆರೋಗ ಆವರಿಸಿ ಕಾಯಿಕಟ್ಟಿದ್ದ ಫಸಲು ಕೊಳೆಯಲಾರಂಭಿಸಿದೆ.

ವರುಣನ ಆರ್ಭಟಕ್ಕೆ ಶಾಂತಳ್ಳಿ ಹೋಬಳಿ ತತ್ತರಿಸಿದೆ. ಗದ್ದೆಗಳಲ್ಲಿ ನೀರು ತುಂಬಿದ್ದು, ಎಲ್ಲೆಲ್ಲೂ ಜಲದ ಒರತೆ ಕಂಡುಬರುತ್ತಿದೆ. ಹೊಳೆಗಳು ತುಂಬಿ ಹರಿಯುತ್ತಿರುವದರಿಂದ ಹೊಳೆಪಾತ್ರದ ಗದ್ದೆಗಳು ಜಲಾವೃತ ಗೊಳ್ಳುತ್ತಿವೆ. ಯಡೂರಿನಲ್ಲಿ ನಾಟಿ ಪೈರು ಕೊಳೆಯುತ್ತಿದ್ದರೆ, ಬಳ್ಳಿಗಳಲ್ಲಿ ಕಾಳುಕಟ್ಟಿದ್ದ ಕರಿಮೆಣಸು ಹಳದಿ ಬಣ್ಣಕ್ಕೆ ತಿರುಗಿ ನೆಲಕ್ಕೆ ಬೀಳುತ್ತಿವೆ.

ಸೋಮವಾರಪೇಟೆ, ಗೌಡಳ್ಳಿ, ಮಾದಾಪುರ, ಐಗೂರು, ಮಸಗೋಡು, ಹಾನಗಲ್ಲು, ಬೇಳೂರು, ತೋಳೂರುಶೆಟ್ಟಳ್ಳಿ, ಗೋಣಿಮರೂರು ಭಾಗದಲ್ಲಿ ಪ್ರಸಕ್ತ ವರ್ಷ ಉತ್ತಮ ಕಾಳುಮೆಣಸು ಫಸಲು ಬರುವ ನಿರೀಕ್ಷೆಯಿದ್ದು ಮಳೆಯ ಕಾರಣದಿಂದ ನಿರೀಕ್ಷೆ ಹುಸಿಯಾಗುತ್ತಿದೆ.

ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಗ್ರಾಮಗಳು ಮಳೆಯಲ್ಲಿ ಮುಳುಗಿ ಹೋಗಿವೆ. ಕುಡಿಗಾಣ ಗ್ರಾಮದ ಹೊಳೆ ತುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಡೆಯಾಗುವ ಹಂತದಲ್ಲಿದೆ. ಶಾಂತಳ್ಳಿಗೆ ಈವರೆಗೆ 180 ಇಂಚು ಮಳೆಯಾಗಿದೆ. ಹೆಗ್ಗಡಮನೆ, ಕೊತ್ನಳ್ಳಿ, ಕುಡಿಗಾಣ ವ್ಯಾಪ್ತಿಯಲ್ಲಿ 200 ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಸೋಮವಾರಪೇಟೆ ಪಟ್ಟಣ ಸಮೀಪ ಕಿಬ್ಬೆಟ್ಟ ಗ್ರಾಮಕ್ಕೆ ಕಳೆದ 24 ಗಂಟೆಗಳಲ್ಲಿ 2.60 ಇಂಚು ಮಳೆ ಸುರಿದಿದೆ.

ವಿದ್ಯುತ್ ಸಮಸ್ಯೆ

ಶನಿವಾರಸಂತೆ: ಪಟ್ಟಣ, ಕೊಡ್ಲಿಪೇಟೆ ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಆಶ್ಲೇಷಾ ಮಳೆಯ ಅಬ್ಬರ ತಗ್ಗಿದೆ. ಅಲ್ಲಲ್ಲಿ ಮರ ತಂತಿಗಳ ಮೇಲೆ ಹಾಗೂ ರಸ್ತೆಗಳ ಮೇಲೆ ಬಿದ್ದಿವೆ. ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ. ವಿದ್ಯುತ್ ಇಲಾಖೆ ದುರಸ್ತಿ ಕಾರ್ಯಕೈಗೊಂಡಿದೆ.

ಬೆಳಿಗ್ಗೆ 10ರ ವರೆಗೆ ಧಾರಾಕಾರ ವಾಗಿ ಸುರಿಯುತ್ತಿದ್ದ ಮಳೆ ಬಿಡುವು ನೀಡಿದ್ದು, ದಟ್ಟವಾಗಿ ಮೋಡ ಕವಿದ ವಾತಾವರಣವಿತ್ತು. ನಿಡ್ತ ಮತ್ತು ಆಲೂರು ಸಿದ್ದಾಪುರ ಗ್ರಾ.ಪಂ.ಗಳ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆ ಮೇಲೆ ಮಳೆ ನೀರು ಹೊಳೆಯಾಗಿ ಹರಿದು ಬರುತ್ತಿದ್ದ ದೃಶ್ಯ ಕಂಡುಬಂದಿತು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಧ್ಯಾಹ್ನ 3 ಗಂಟೆಯವರೆಗೂ ಧಾರಾಕಾರ ಮಳೆಯಾಗಿದ್ದು, ಕಾಜೂರು ಸೇತುವೆ ತುಂಬಿ ಹರಿಯುತ್ತಿದೆ. ಮಳೆ ಮುಂದುವರೆದಲ್ಲಿ ರಸ್ತೆ ಮೇಲೆ ನೀರು ಹರಿದು ಗದ್ದೆಗಳು ಜಲಾವೃತಗೊಳ್ಳ ಬಹುದು ಎಂಬ ಭೀತಿ ರೈತರದು.

ಮನೆ ಬಿದ್ದು ಹಾನಿ : ದೊಡ್ಡಕೊಳತ್ತೂರು ಗ್ರಾಮದ ನಿವಾಸಿ ಪ್ರೀಯಾ ಎಂಬವರ ವಾಸದ ಮನೆ ಅಧಿಕ ಮಳೆಯಿಂದ ಕುಸಿದು ಬಿದ್ದು ವಾಸಕ್ಕೆ ಮನೆಯಿಲ್ಲದ ಕಾರಣ ಕುಟುಂಬದ ನಾಲ್ಕು ಜನರಿಗೆ ತಾತ್ಕಾಲಿಕವಾಗಿ ಸರಕಾರಿ ಶಾಲೆಯ ಒಂದು ಕೊಠಡಿಯಲ್ಲಿ ವಾಸಿಸಲು ಅನುವು ಮಾಡಿಕೊಡಲಾಗಿದೆ.

ಗದ್ದೆ ಜಲಾವೃತ

ಕುಶಾಲನಗರ: ಕಾವೇರಿ ನದಿ ತಟದ ಹೊಲ, ಗದ್ದೆಗಳು ಬಹುತೇಕ ನೀರಿನಿಂದ ಆವೃತಗೊಂಡಿವೆ. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಕಡಿಮೆಯಿದ್ದರೂ ಜಲಾನಯನ ಪ್ರದೇಶಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಕಾರಣ ನದಿಯ ಹರಿವು ಏರತೊಡಗಿದೆ. ಕೊಪ್ಪ ಕುಶಾಲನಗರ ಗಡಿ ಭಾಗದ ಸೇತುವೆ ಕೆಳಭಾಗದಲ್ಲಿ 24 ಅಡಿಗಿಂತಲೂ ಎತ್ತರದಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಾಣಬಹುದು.

ಕೊಪ್ಪ, ಆವರ್ತಿ ವ್ಯಾಪ್ತಿಯ ಗ್ರಾಮಗಳ ಸಂಪರ್ಕ ರಸ್ತೆಗಳಲ್ಲಿ ನೀರು ತುಂಬಿದ್ದು ಸಂಚಾರ ವ್ಯವಸ್ಥೆ ಏರುಪೇರಾಗಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ನದಿಯಲ್ಲಿ ಅತ್ಯಧಿಕ ಪ್ರಮಾಣದ ನೀರು ಹರಿಯುತ್ತಿದೆ. ಯಾವದೇ ಪ್ರಾಣಾಪಾಯ ಪ್ರಕರಣಗಳು ವರದಿಯಾಗಿಲ್ಲ.

ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವಿನ ಹಿನ್ನೆಲೆಯಲ್ಲಿ ನದಿಗೆ ಹೆಚ್ಚುವರಿ ನೀರು ಹರಿಸಲಾಗಿದೆ. ಜಲಾಶಯಕ್ಕೆ 9 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು ನದಿಗೆ 22 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿ ನಾಗರಾಜ್ ಮಾಹಿತಿ ನೀಡಿದ್ದಾರೆ. ಜಲಾಶಯದ ಗರಿಷ್ಠ ಮಟ್ಟ 2859 ಅಡಿಗಳಾಗಿದ್ದು 2857.6 ಅಡಿಗಳಷ್ಟು ನೀರಿನ ಮಟ್ಟ ಕಾಯ್ದುಕೊಂಡು ಅಧಿಕ ನೀರನ್ನು ನದಿಗೆ ಬಿಡಲಾಗುತ್ತಿದೆ ಎಂದಿದ್ದಾರೆ.

ಅಣೆಕಟ್ಟೆಯ ಕೆಳಭಾಗದ ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಹುದುಗೂರು, ಗುಡ್ಡೆಹೊಸೂರು ಸಂಚಾರ ವ್ಯವಸ್ಥೆ ಸ್ಥಗಿತಗೊಂಡಿದೆ.

ಇಳಿಮುಖವಾದ ಮಳೆ

ನಾಪೆÇೀಕ್ಲು: ಸಂಜೆಯಿಂದ ನಾಪೆÇೀಕ್ಲು ವ್ಯಾಪ್ತಿಯಲ್ಲಿ ವರುಣದೇವ ತನ್ನ ತೀವ್ರತೆಯನ್ನು ಕಡಿಮೆ ಗೊಳಿಸಿದಂತೆ ಕಂಡು ಬರುತ್ತಿದೆ. ಅಲ್ಲಲ್ಲಿ ಉಂಟಾದ ಪ್ರವಾಹ ಇಳಿಮುಖ ವಾಗುತ್ತಿದೆ. ಆದರೆ ನಾಲಡಿ ಗ್ರಾಮದ ಅಂಬಲಪೆÇಳೆಯ ಪ್ರವಾಹ ತಾ. 9ರ ಮಧ್ಯಾಹ್ನದವರೆಗೆ ಹಾಗೆಯೇ ಮುಂದುವರಿದಿದೆ. ಇನ್ನುಳಿದಂತೆ ಯಾವದೇ ಪ್ರವಾಹ, ಆಸ್ತಿ ಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಅಧಿಕಾರಿಗಳ ಭೇಟಿ

ನಾಪೆÇೀಕ್ಲು: ಇತ್ತೀಚೆಗೆ ಸುರಿದ ಮಳೆಯಿಂದ ಕಾಫಿ ಫಸಲು ನಷ್ಟಗೊಂಡ ಬಗ್ಗೆ ಪರಿಶೀಲಿಸಲು ಕಾಫಿ ಮಂಡಳಿಯ ಉಪನಿರ್ದೇಶಕ ರಾಮಗೌಂಡರ್, ಹಿರಿಯ ಸಂಪರ್ಕಾಧಿಕಾರಿ ಎನ್.ಜಯರಾಮ್, ವಿಜ್ಞಾನಿಗಳಾದ ಲಮಾಣಿ, ಗೋವಿಂದಪ್ಪ ಕಕ್ಕಬ್ಬೆಯ ಕುಂಜಿಲ, ನಾಲಡಿ, ಯವಕಪಾಡಿ ಮತ್ತು ಮರಂದೋಡ ಗ್ರಾಮಗಳ ಕಾಫಿ ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ಮಾತನಾಡಿದ ಕಾಫಿ ಮಂಡಳಿ ಉಪನಿರ್ದೇಶಕ ರಾಮಗೌಂಡರ್ ಫಸಲು ನಷ್ಟದ ಬಗ್ಗೆ ವರದಿ ತಯಾರಿಸಿ ಸರಕಾರಕ್ಕೆ ನೀಡಲಾಗುವದು ಎಂದರು.

ನಂತರ ಕಕ್ಕಬ್ಬೆ ಫಾರ್ಮರ್ಸ್ ಕ್ಲಬ್ ವತಿಯಿಂದ ಕಾಫಿ ಮಂಡಳಿಗೆ ಸೂಕ್ತ ಪರಿಹಾರ ನೀಡುವಂತೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಕ್ಲಬ್‍ನ ಅಧ್ಯಕ್ಷ ಕೋಟೆರ ಸುರೇಶ್ ಚಂಗಪ್ಪ ಈ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದ ಕಾರಣ ಪ್ರತೀ ವರ್ಷ ಕಾಫಿ ಫಸಲು ನಷ್ಟ ಸಂಭವಿಸುತ್ತಿದೆ. ಅತೀ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಶೇ. 80ರಷ್ಟು ಫಸಲು ನಷ್ಟಗೊಂಡಿದೆ. ಕಾಫಿ ಮಂಡಳಿ ಮತ್ತು ಸರಕಾರ ಇದಕ್ಕೆ ಶಾಶ್ವತ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದರು.

ಕ್ಲಬ್‍ನ ಕಾರ್ಯದರ್ಶಿ ಅನ್ನಾಡಿಯಂಡ ದಿಲೀಪ್ ಕುಮಾರ್, ಸದಸ್ಯರು, ಕಂದಾಯ ಪರಿವೀಕ್ಷಕ, ಗ್ರಾಮ ಲೆಕ್ಕಿಗರು, ನಾಲ್ಕು ಗ್ರಾಮಗಳ ಗ್ರಾಮಸ್ಥರು ಇದ್ದರು.

ಸಂಚಾರ ತೊಡಕು : ಮಡಿಕೇರಿ, ಸೋಮವಾರಪೇಟೆ ಮಾರ್ಗದಲ್ಲಿ ಅಲ್ಲಲ್ಲಿ ಭೂಕುಸಿತದಿಂದ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಹಾಲೇರಿ ಬಳಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಈ ವ್ಯಾಪ್ತಿಯ ಮಕ್ಕಂದೂರು, ತಂತಿಪಾಲ ರಸ್ತೆ ಹಾಗೂ ಹಟ್ಟಿಹೊಳೆ, ಮುಕ್ಕೋಡ್ಲು ಮಾರ್ಗದಲ್ಲಿಯೂ ಭೂಕುಸಿತದಿಂದ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಕುಸಿದ ಮಣ್ಣು ಮತ್ತು ಮರಗಳನ್ನು ತೆರವುಗೊಳಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ತಡೆಗೋಡೆ ಕುಸಿತ

ನಾಪೆÇೀಕ್ಲು : ನಿನ್ನೆ ಸುರಿದ ಭಾರೀ ಮಳೆಗೆ ನಾಲಡಿ ಗ್ರಾಮದ ಬೊಳಿಯಾಡಿರ ರೆಮ್ಮಿ ಕಾರ್ಯಪ್ಪ ಅವರ ಮನೆಯ ತಡೆಗೋಡೆ ಕುಸಿದು ಅಪಾರ ನಷ್ಟ ಸಂಭವಿಸಿದೆ.

ಸುಂಟಿಕೊಪ್ಪ : ಕಳೆದೆರಡು ದಿನಗಳಿಂದ ಆರ್ಭಟಿಸುತ್ತಿರುವ ಮಳೆಯು ಎಡೆಬಿಡದೇ ಧಾರಾಕಾರವಾಗಿ ಸುರಿಯುತ್ತಿದ್ದು, ಹಲವು ಮನೆಗಳಿಗೆ ನೀರು ನುಗ್ಗಿ ಆತಂಕವನ್ನೇ ಸೃಷ್ಟಿಮಾಡಿತ್ತು.

ಪಟ್ಟಣದ ಎರಡನೇ ವಿಭಾಗದ ಮಮ್ಮು ಎಂಬವರ ಮನೆಯ ಹಿಂಭಾಗದಲ್ಲಿರುವ ಉಲುಗುಲಿ ತೋಟದಿಂದ ಹರಿದುಬಂದ ನೀರಿನಿಂದಾಗಿ ಭೂ ಕುಸಿದು ನೀರು ಮನೆಯೊಳಗೆ ಹರಿಯತೊಡಗಿತು. ರಾತ್ರಿ 2 ಗಂಟೆಯ ಸುಮಾರಿಗೆ ಮನೆಯ ಎಲ್ಲ ಕೋಣೆಗಳಿಗೆ ನೀರು ಹರಿದುದರಿಂದ ಹೆದರಿದ ಮನೆಯವರು ಗುರುವಾರ ಬೆಳಗ್ಗಿನವರೆಗೂ ನಿದ್ರೆಯಿಲ್ಲದೇ ಆತಂಕದಲ್ಲಿ ಕಾಲ ಕಳೆದರು.

ಸಮೀಪದ ಗಿರಿಯಪ್ಪನ ಮನೆಯ ಬಳಿ ಇರುವ ರಿಜ್ವಾನ್, ಇಸ್ಮಾಯಿಲ್, ವಿಶು ಸೇರಿದಂತೆ ಅಕ್ಕ ಪಕ್ಕದ ಮನೆಗಳಿಗೆ ರಾತ್ರಿ ನೀರು ಹರಿದಿದೆ. ಇವರ ಮನೆಯ ಪಕ್ಕದಲ್ಲಿರುವ ಕೊಳ್ಳಕ್ಕೆ ನೀರು ಹರಿಯಲು ಜಾಗವಿಲ್ಲದ್ದರಿಂದ ಮಳೆ ನೀರು ಸಂಪೂರ್ಣವಾಗಿ ಮನೆಯೊಳಗೆ ನುಗ್ಗಿದೆ.

ಸಮೀಪದ ಕಂಬಿಬಾಣೆ ಗ್ರಾ.ಪಂ.ಗೆ ಸೇರಿದ ಉಪ್ಪುತೋಡುವಿನ ಮಂಜುನಾಥ ರೈ, ಚಂದ್ರಹಾಸ ರೈ, ಪುರುಷೋತ್ತಮ ರೈ, ಆಜಡ್ಕ ಕುಟುಂಬಸ್ಥರಿಗೆ ಸೇರಿದ ಗದ್ದೆಗಳು ಮಳೆಯಿಂದ ಜಲಾವೃತಗೊಂಡಿವೆ.

ಉಪ್ಪುತೋಡು - ಕಂಬಿಬಾಣೆ ಮುಖ್ಯ ರಸ್ತೆಯ ಮೋರಿ ಸಂಪೂರ್ಣ ಕುಸಿತವಾಗಿದ್ದು, ಕಾವೇರಿ ನೀರಾವರಿ ನಿಗಮದ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಈ ಭಾಗದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.