ಮಡಿಕೇರಿ, ಆ. 9 : ನಗರದ ಶ್ರೀದಂಡಿನ ಮಾರಿಯಮ್ಮ ದೇವಾಲಯದ ದಸರಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಿ.ಎಸ್.ರಂಜಿತ್ ಕುಮಾರ್, ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್.ನಾಗರಾಜ್ ಹಾಗೂ ಖಜಾಂಚಿಯಾಗಿ ಕೆ.ವಿ.ಸುಬ್ರಮಣಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ದಿನೇಶ್ ನಾಯರ್, ಕೆ.ಕೆ.ಮೋಹನ್, ಮೋಹನ್ ಸಂಪತ್, ಕೆ.ಎಂ.ಪ್ರದೀಪ್, ಚಂದ್ರ, ಅಮನ್, ಕೆ.ಎನ್.ನಳಿನಿ ಸದಾಶಿವ ಶೆಟ್ಟಿ, ರಮೇಶ್, ಮಧು, ಮಹೇಶ್, ವಿಜಯ ಕರ್ಕೆರ, ಸಹ ಕಾರ್ಯದರ್ಶಿಗಳಾಗಿ ಕೆ.ಎ.ಅನಿಲ್, ಎಂ.ಆರ್.ದಿನು, ರಘು, ರಂಜು, ಸಹ ಖಜಾಂಚಿಗಳಾಗಿ ವಿ.ಎ.ಮಂಜುನಾಥ, ಪಿ.ಹೆಚ್.ಅಭಿಜಿತ್ ಅವರುಗಳು ಆಯ್ಕೆಯಾಗಿದ್ದಾರೆ.