ನಾಪೆÇೀಕ್ಲು, ಆ. 9: ಇತ್ತೀಚೆಗೆ ಕುಶಾಲನಗರದ ಬಳಿ ಹಾರಂಗಿ ನಾಲೆಗೆ ವಾಹನ ಸಮೇತವಾಗಿ ಉರುಳಿ ಬಿದ್ದು ಮೃತಪಟ್ಟ ಪಳನಿಸ್ವಾಮಿ ಅವರ ಮನೆಗೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಪಳನಿಸ್ವಾಮಿಯ ತಾಯಿ ಕರ್ಪಮ್ಮ, ಸಹೋದರ ಸುಬ್ರಮಣಿ, ಮಾವ ವಿಜಯ ಮೇಸ್ತ್ರಿ ಸೇರಿದಂತೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಪಾಡಿಯಮ್ಮಂಡ ಮನು ಮಹೇಶ್, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಮತ್ತಿತರ ಕಾರ್ಯಕರ್ತರು ಇದ್ದರು.