ಮಡಿಕೇರಿ, ಆ. 7: ರಾಜ್ಯ ವಿಧಾನಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಲಾಗಿದ್ದು, ಜಿಲ್ಲೆಯ ಶಾಸಕ, ಮಾಜಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರನ್ನು ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಬಿಜೆಪಿಯಿಂದ ಆರ್. ಅಶೋಕ್ ಅವರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರನ್ನಾಗಿ ಹಾಗೂ ಬೋಪಯ್ಯ ಅವರನ್ನು ಕಾಗದ ಪತ್ರಗಳ ಸಮಿತಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ.ಕಾಗದ ಪತ್ರಗಳ ಸಮಿತಿಯ ಜವಾಬ್ದಾರಿ ಮಹತ್ತರದಾಗಿದ್ದು, ಕಾರ್ಪೋರೇಶನ್, ನಿಗಮ, ಮಂಡಳಿ, ಜಿ.ಪಂ., ವಿ.ವಿ.ಗಳು ಸೇರಿದಂತೆ ಎಲ್ಲ ಪ್ರಮುಖ ಸಂಸ್ಥೆಗಳ ವಾರ್ಷಿಕ ಆಡಿಟ್ ವರದಿಗಳ ಪರಿಶೀಲನೆ ಅವುಗಳಲ್ಲಿನ ಲೋಪದೋಷಗಳು, ನೂನ್ಯತೆಗಳನ್ನು ಪತ್ತೆ ಹಚ್ಚಿ ಕ್ರಮಕ್ಕೆ ಸರಕಾರಕ್ಕೆ ಶಿಫಾರಸ್ಸು ಮಾಡುವ ಜಬಾಬ್ದಾರಿಯಾಗಿದೆ.