ನಾಪೆÇೀಕ್ಲು, ಆ. 7: ತಾ. 6 ರಂದು ಕುಶಾಲನಗರದ ಸಮೀಪ ಹಾರಂಗಿ ನಾಲೆಯಲ್ಲಿ ಮುಳುಗಿ ಮೃತ ಪಟ್ಟ ನಾಲ್ವರ ಅಂತ್ಯಕ್ರಿಯೆಯು ನಾಪೆÇೀಕ್ಲು ಕಾವೇರಿ ನದಿ ತೀರದ ಹಿಂದು ರುದ್ರಭೂಮಿಯಲ್ಲಿ ದುಃಖ, ರೋಧನ ಕಣ್ಣೀರಿನ ನಡುವೆ ಮಧ್ಯಾಹ್ನ 12.45ಕ್ಕೆ ನೆರವೇರಿತು.

ಈ ಸಂದರ್ಭದಲ್ಲಿ ನಾಪೆÇೀಕ್ಲು ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟು ಗಳನ್ನು ಸ್ವ-ಇಚ್ಛೆಯಿಂದ ಮುಚ್ಚಿ ಮೃತರಿಗೆ ಸಂತಾಪ ಸೂಚಿಸಲಾಯಿತು.

ಎಲ್ಲರೂ ರಕ್ತಸಂಬಂಧಿಗಳೇ: ಮೃತ ಕುಟುಂಬ ನಾಪೆÇೀಕ್ಲು ಇಂದಿರಾನಗರ ದಲ್ಲಿ ಹೆಚ್ಚಿನ ರಕ್ತಸಂಬಂಧಿಗಳನ್ನು ಹೊಂದಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮದ ದಿ. ಚೆಲುವಸ್ವಾಮಿ ಮತ್ತು ಕರ್ಪಮ್ಮ ದಂಪತಿಗಳ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳ ಪೈಕಿ ಪಳನಿಸ್ವಾಮಿ ಕಿರಿಯ ಮಗನಾಗಿದ್ದರು.

ಪಳನಿಸ್ವಾಮಿ ಮತ್ತು ಅವರ ಅಣ್ಣ ಸುಬ್ರಮಣಿ ನಾಪೆÇೀಕ್ಲುವಿನ ಇಂದಿರಾ ನಗರದಲ್ಲಿಯೇ ವಾಸಮಾಡಿಕೊಂಡು ಗಾರೆ ಕೆಲಸದ ಕಾಂಟ್ರ್ಯಾಕ್ಟರ್ ಆಗಿದ್ದರು. ಪಳನಿಸ್ವಾಮಿಯ ಒಬ್ಬ ಅಕ್ಕನನ್ನು ಗೋಣಿಕೊಪ್ಪಕ್ಕೆ ವಿವಾಹಮಾಡಿದ್ದರೆ, ಇನ್ನೊಬ್ಬರನ್ನು ಇಂದಿರಾನಗರದ ವಿಜಯ ಮೇಸ್ತ್ರಿ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಪಳನಿಸ್ವಾಮಿ ತನ್ನ ಅಕ್ಕನ ಮಗಳಾದ ಮೃತೆ ಸಂಜು ಕುಮಾರಿ ಅವರನ್ನೇ ವಿವಾಹವಾಗಿದ್ದರು.

ಆದುದರಿಂದ ಈ ಕುಟುಂಬಗಳು ಪರಸ್ಪರ ಸಂಬಂಧ ಹೊಂದಿದ್ದು, ಎಲ್ಲರಿಗೂ ಈ ಘಟನೆ ಆತಂಕಕಾರಿ ಯಾಗಿದೆ. ಒಂದೆಡೆ ತಾಯಿ ಕರ್ಪಮ್ಮ ತನ್ನ ಮಗಳು, ತನ್ನ ಸೊಸೆ ಹಾಗೂ ಮಗಳ ಮಗಳು ಮತ್ತು ಮೊಮ್ಮಕ್ಕಳನ್ನು ಕಳೆದುಕೊಂಡು ರೋಧಿಸುತ್ತಿದ್ದರೆ, ವಿಜಯ ಮೇಸ್ತ್ರಿ ತನ್ನ ಸೋದರಳಿಯ, ಮಗಳು, ಮೊಮ್ಮಕ್ಕಳನ್ನು ಕಳೆದುಕೊಂಡು ಪರಿತಪಿಸುವಂತಾಗಿದೆ. ಒಟ್ಟಿನಲ್ಲಿ ಈ ಸಾವು ಇಂದಿರಾನಗರದ ಬಹುತೇಕ ಸಂಬಂಧಿಕರನ್ನು, ನೆರಹೊರೆಯವರನ್ನು ಕಂಗೆಡಿಸಿದೆ.

ನೀರು ಪಾಲಾದ ಮಕ್ಕಳಲ್ಲಿ ಪೂರ್ಣಿಮ ಡಿಪ್ಲೊಮೋ ಮಾಡುತ್ತಿದ್ದಳು. ಅವಳ ಸಹೋದರ ಲಿಖಿತ್ 6ನೇ ತರಗತಿಯಲ್ಲಿ ಗ್ರಹಾಧಾರಿತ ಮಗುವಾಗಿ ವ್ಯಾಸಂಗ ಮಾಡುತ್ತಿದ್ದನೆಂದು ಬೇತುವಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.

ಅಧ್ಯಕ್ಷರ ಭೇಟಿ: ಮೃತ ಕುಟುಂಬದ ಮನೆಗೆ ಇಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್, ಸದಸ್ಯ ಮುರಳಿ ಕರುಂಬಯ್ಯ, ರವಿ ಬಸಪ್ಪ, ಇನ್ನಿತರರು ಭೇಟಿ ನೀಡಿ ಸಾಂತ್ವನ ಹೇಳಿದರು

-ಚಿತ್ರ: ದುಗ್ಗಳ, ವರದಿ: ಪಿ.ವಿ.ಪ್ರಭಾಕರ್