ನಾಪೆÇೀಕ್ಲು, ಆ. 6: ಮಾನವನ ಮೂಲಭೂತ ಸೌಲಭ್ಯಗಳಲ್ಲಿ ಕುಡಿಯುವ ನೀರು, ಶೌಚಾಲಯ, ವಸತಿ ಮುಖ್ಯವಾದದ್ದು. ಆದರೆ ಮಡಿಕೇರಿ ತಾಲೂಕುವಿನಲ್ಲಿ ಎರಡನೇ ಅತೀ ದೊಡ್ಡ ಪಟ್ಟಣ ಎಂದು ಹೆಗ್ಗಳಿಕೆಗೆ ಪಾತ್ರವಾದ ನಾಪೆÇೀಕ್ಲು ಗ್ರಾಮ ಪಂಚಾಯಿತಿ ಯಲ್ಲಿ ಸಾರ್ವಜನಿಕರಿಗೆ ಬೇಕಾದ ಶೌಚಾಲಯದ ವ್ಯವಸ್ಥೆಯೇ ಸರಿಯಿಲ್ಲ.

ಇಲ್ಲಿಗೆ ತೆರಳುವ ಜನರನ್ನು ಒಂದು ದಿನ ನೀರಿಲ್ಲ!, ಮತ್ತೊಂದು ದಿನ ಶೌಚಾಲಯ ರಿಪೇರಿಯಾಗಿದೆ...! ಮಗದೊಂದು ದಿನ ಶೌಚಾಲಯದಲ್ಲಿ ನೀರು ತುಂಬಿದೆ ಎಂದು ಕಾರಣ ಹೇಳಿ ಜನರನ್ನು ವಾಪಾಸ್ಸು ಕಳುಹಿಸುತ್ತಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರೊಂದಿಗೆ ಶೌಚಾಲಯದ ಹೊಲಸು ನೀರು ಸಮೀಪದಲ್ಲಿರುವ ತರಕಾರಿ ಅಂಗಡಿ ಬಳಿ ಹರಿಯುತ್ತಿರುವ ದಾಗಿಯೂ ದೂರಿದ್ದಾರೆ.

ಈ ಬಗ್ಗೆ ಪತ್ರಿಕೆಗೆ ಹೇಳಿಕೆ ನೀಡಿದ ಸಾರ್ವಜನಿಕರು ನಾಪೆÇೀಕ್ಲು ಪಟ್ಟಣದ ಬಸ್ ನಿಲ್ದಾಣದ ಬಳಿಯಿರುವ ಗ್ರಾಮ ಪಂಚಾಯಿತಿ ಶೌಚಾಲಯ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿದೆ. ಆದರೆ ಇಲ್ಲಿ ವಾರದ ಆರು ದಿನಗಳೂ ಸಮಸ್ಯೆಯ ಕಾರಣದಿಂದ ಮುಚ್ಚಲಾಗುತ್ತಿದೆ. ಇದನ್ನು ನಂಬಿ ಬರುವ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ.

-ಪಿ.ವಿ. ಪ್ರಭಾಕರ್