*ಗೋಣಿಕೊಪ್ಪಲು, ಆ. 5: ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ದೇವರಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೂ. 15 ಸಾವಿರ ಮೌಲ್ಯದ ಡ್ರಂ ಸೆಟ್ ಅನ್ನು ಉದಾರವಾಗಿ ನೀಡಲಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎಸ್. ಸೋಮಕ್ಕ ಅವರಿಗೆ ಸಂಘದ ಅಧ್ಯಕ್ಷ ಚೆಪ್ಪುಡಿರ ರಾಮಕೃಷ್ಣ ಈಚಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಸಂಘದ ಶೈಕ್ಷಣಿಕ ನಿಧಿಯಿಂದ ಶಾಲೆಗೆ ಈ ಸೌಲಭ್ಯ ನೀಡಲಾಗಿದೆ. ಶಿಕ್ಷಕರು ಇದನ್ನು ಮಕ್ಕಳ ಮೂಲಕ ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಮುಖ್ಯ ಶಿಕ್ಷಕರ ಕೋರಿಕೆ ಮೇರೆಗೆ ಹಿಂದೆಯೂ ಕೂಡ 30 ಕುರ್ಚಿ, ಒಂದು ಕಂಪ್ಯೂಟರ್ ಪ್ರಿಂಟರ್ ಕೊಡಲಾಗಿತ್ತು ಎಂದರು.

ಉಪಾಧ್ಯಕ್ಷ ಮನು ನಂಜಪ್ಪ, ಸದಸ್ಯರಾದ ಚೆಕ್ಕೇರ ಬಿಪಿನ್ ಅಚ್ಚಯ್ಯ, ಜಿ.ಪಿ. ಅಶೋಕ್, ಕೆ.ಕೆ. ಪದ್ಮನಾಭ, ಬಸವಣ್ಣ, ಕೆ.ಎಂ. ರಮೇಶ್, ಹೆಚ್.ಹೆಚ್. ಶಿವಣ್ಣ, ಹೆಚ್.ಎಸ್. ಗೋವಿಂದ, ಜಿ.ಎನ್. ಜಯಮ್ಮ, ಹೆಚ್.ಡಿ. ಲಕ್ಷ್ಮಿ, ಶಿಕ್ಷಕರಾದ ವೈಲೆಟ್ ಡಿಸೋಜ, ಆರತಿ, ಕೆ.ಬಿ. ಕಾವೇರಮ್ಮ, ಹೆಚ್. ಲೀಲಾ, ಕೆ. ನಾಗಶ್ರೀ, ಕೆ.ಬಿ. ಸರೋಜ ಹಾಜರಿದ್ದರು.