ಕೂಡಿಗೆ, ಆ. 4: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಮುಖ್ಯನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸುಮಾರು 25 ವರ್ಷಗಳ ಹಿಂದಿನ ಸೇತುವೆಯ ಇಕ್ಕೆಲಗಳ ತಡೆಗೋಡೆ ಕುಸಿದಿದೆ.
ಈ ಸೇತುವೆಯ ಮೇಲ್ಭಾಗವು ಮದಲಾಪುರ-ಸೀಗೆಹೊಸೂರು ಮಾರ್ಗದ ಮುಖ್ಯ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಅನೇಕ ಲಾರಿಗಳು , ಕಲ್ಲು ಸಾಗಾಣಿಕೆಯಲ್ಲಿ ತೊಡಗಿದ ಹಿನ್ನೆಲೆ ತಡೆಗೋಡೆ ಕುಸಿತಕ್ಕೆ ಕಾರಣವಾಗಿದೆ.
ಸಂಬಂಧಪಟ್ಟವರು ಮುಂದಾಗುವ ಭಾರೀ ಅನಾಹುತವನ್ನು ತಪ್ಪಿಸಲು ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.