ಕುಶಾಲನಗರ, ಆ. 4: ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರು ರಕ್ಷಣೆ ಮಾಡಿದ ಸಾರಂಗ ಸಾವನ್ನಪ್ಪಿದೆ. ಆನೆಕಾಡು ಅರಣ್ಯ ಬಳಿ ರಸ್ತೆ ದಾಟುವ ಸಂದರ್ಭ ಅಪರಿಚಿತ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಜಿಂಕೆಗೆ ಸಚಿವರು ಆರೈಕೆ ಮಾಡಿ, ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ ಕಾವೇರಿ ನಿಸರ್ಗಧಾಮಕ್ಕೆ ಸ್ಥಳಾಂತರಿಸಲಾಗಿತ್ತು. ಜಿಂಕೆಯ ಬಲಗಾಲು ಮುರಿತ ಕಂಡುಬಂದಿದ್ದು, ಚೇತರಿಸಿಕೊಂಡು ರಾತ್ರಿ ವೇಳೆ ಮೃತಪಟ್ಟಿದೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ ತಿಳಿಸಿದ್ದಾರೆ. ಗಾಯಗೊಂಡಿದ್ದ ಜಿಂಕೆಯನ್ನು ವನ್ಯಜೀವಿ ತಜ್ಞರಾದ ಡಾ.ಜೀವನ್, ಡಾ.ಚಂದ್ರಹಾಸ್ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿಲ್ಲ ಎಂದಿದ್ದಾರೆ.