ವೀರಾಜಪೇಟೆ, ಆ. 3: ಹಿಂದೂ ಜಾಗರಣಾ ವೇದಿಕೆ ವೀರಾಜಪೇಟೆ ತಾಲೂಕು ವತಿಯಿಂದ 72 ನೇ ಸ್ವಾತಂತ್ರ್ಯ ದಿನದ ಪ್ರಯುಕ್ತ ತಾ. 5 ರಂದು ಅಮ್ಮತ್ತಿ ಕೊಡವ ಸಮಾಜದಲ್ಲಿ ಅಖಂಡ ಭಾರತ ಸಂಕಲ್ಪ ದಿನವನ್ನು ಆಚರಿಸಲಾಗುವದು ಎಂದು ಜಿಲ್ಲಾಧ್ಯಕ್ಷ ಮೇವಡ ಅಯ್ಯಣ್ಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರಿ ಸಭೆಯ ಅಧ್ಯಕ್ಷತೆಯನ್ನು ವೀರಾಜಪೇಟೆ ತಾಲೂಕು ಸಂಘ ಚಾಲಕ ಕುಟ್ಟಂಡ ಪ್ರಿನ್ಸ್ ಗಣಪತಿ ವಹಿಸಲಿದ್ದಾರೆ. ಹಿಂದು ಜಾಗರಣಾ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ರಾಧಕೃಷ್ಣ ಅಡ್ಯಾಂತಾಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಅಲ್ಲುಮಾಡ ಶರತ್, ವೀರಾಜಪೇಟೆ ನಗರ ಅಧಕ್ಷ ಜೆ.ಪಿ ಅರುಣ್, ಉಪಾಧ್ಯಕ್ಷ ಟಿ.ಕೆ ಪದ್ಮನಾಭ, ನಗರ ಕಾರ್ಯದರ್ಶಿ ಆರ್ ಸುರೇಶ್, ಅಮ್ಮತ್ತಿ ಘಟಕ ಅಧ್ಯಕ್ಷ ಸಿ.ಕೆ ರವಿ ಉಪಸ್ಥಿತರಿದ್ದರು.