ಸಿದ್ದಾಪುರ, ಆ. 3: ನೆಲ್ಲಿಹುದಿಕೇರಿ ಗ್ರಾಮದ ದುರುಸ್ಸಲಾಂ ಮದರಸ ಆವರಣದಲ್ಲಿ ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ನ ವತಿಯಿಂದ ಮದರಸ ವಿದ್ಯಾರ್ಥಿಗಳಿಗೆ ಚುನಾವಣೆ ನಡೆಯಿತು.
ರಾಜಕೀಯ ಚುನಾವಣೆಯಂತೆ ಅಧ್ಯಾಪಕರು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಿದ್ದರು. ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಸ್ಥಾನಗಳಿಗೆ ಚುನಾವಣೆ ನಡೆಯಿತು. 240 ಮದರಸಗಳ ವಿದ್ಯಾರ್ಥಿಗಳು ಮತ ಚಲಾಯಿಸಿದರು. 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 3 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಶೀಲರಾದರು.
ಅಧ್ಯಕ್ಷ ಸ್ಥಾನದಲ್ಲಿ ಸ್ಪರ್ಧಿಸಿದ್ದ ರಾಝಿಕ್ 109 ಮತಗಳನ್ನು, ಕಾರ್ಯದರ್ಶಿ ಸ್ಥಾನದಲ್ಲಿ ಉಬೈಸ್ 130 ಮತಗಳನ್ನು, ನಿಝಾಮ್ 62 ಮತ ಪಡೆದು ಖಜಾಂಚಿ ಸ್ಥಾನಕ್ಕೆ ಆಯ್ಕೆ ಆದರು. ಮುಖ್ಯ ಚುನಾವಣಾಧಿಕಾರಿಯಾಗಿ ಮಡಿಕೇರಿಯ ಎಂ. ತಮ್ಲೀಖ್ ದಾರಿಮಿ, ನಾಸಿರ್ ದಾರಿಮಿ, ಕೂಡಿಗೆ ಅಶ್ರಫ್ ಬಾಖವಿ, ಸಮ್ಮದ್ ಮುಸ್ಲಿಯಾರ್, ಸೈದುಲಿ ಫೈಝಿ, ಮಹಮ್ಮದ್ ಮುಸ್ಲಿಯಾರ್ ಹಾಗೂ ಸಿಬ್ಬಂದಿಗಳಾಗಿ ಅಬ್ಶಿರ್, ಸಲ್ಮಾನ್, ಶುಅಐಬ್, ಇರ್ಫಾನ್, ಸಹಲ್ ಇವರುಗಳು ಕಾರ್ಯನಿರ್ವಹಿಸಿದರು. ಮುಖ್ಯ ನಿರ್ದೇಶಕರಾಗಿ ಹನೀಫ್ ಫೈಝಿ ನೇತೃತ್ವ ವಹಿಸಿದ್ದರು.