ಮಡಿಕೇರಿ, ಆ. 3: ಕೆದಮುಳ್ಳೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 2018-19ನೇ ಸಾಲಿನ ಪಂಚಾಯಿತಿ ವಾರ್ಡ್ ಸಭೆಯನ್ನು ಆಯಾ ವಾರ್ಡ್‍ನ ಸದಸ್ಯರ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ಕೆದಮುಳ್ಳೂರು ತೋಮರದ ಸಭೆ ತಾ. 8 ರಂದು ತೋಮರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್.ಯು. ಬೋಜಮ್ಮ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ನಡೆಯಲಿದೆ. ಕೆದಮುಳ್ಳೂರು ಪುತ್ತಮಕ್ಕಿ ಸಭೆ ತಾ. 8 ರಂದು ಪುತ್ತಮಕ್ಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆ.ಆರ್. ರೋಹಿಣಿ ಅಧ್ಯಕ್ಷತೆಯಲ್ಲಿ ಅಪರಾಹ್ನ 12.30 ಗಂಟೆಗೆ ನಡೆಯಲಿದೆ. ಕೊಟ್ಟೋಳಿ ಸಭೆ ತಾ. 9 ರಂದು ಕೊಟ್ಟೋಳಿ ಅಂಗನವಾಡಿ ಕೇಂದ್ರದಲ್ಲಿ ಎಂ.ಎಂ. ಇಸ್ಮಾಯಿಲ್ ಅಧ್ಯಕ್ಷತೆಯಲ್ಲಿ 10.30 ಗಂಟೆಗೆ ನಡೆಯಲಿದೆ. ಪಾಲಂಗಾಲ ಸಭೆ ತಾ. 9 ರಂದು ಪಾಲಂಗಾಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕರಿನೆರವಂಡ ಎನ್. ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಅಪರಾಹ್ನ 2 ಗಂಟೆಗೆ ನಡೆಯಲಿದೆ. ಕ್ರಿಶ್ಚಿಯನ್ ಕಾಲೋನಿ ಸಭೆ ತಾ. 10 ರಂದು ಕೆದಮುಳ್ಳೂರು ಕ್ರಿಶ್ಚಿಯನ್ ಕಾಲೋನಿ ಅಂಗನವಾಡಿ ಕೇಂದ್ರದಲ್ಲಿ ಎಂ.ಎಂ. ಪರಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಾಹ್ನ 11 ಗಂಟೆಗೆ ಜರುಗಲಿದೆ.